ದಾವಣಗೆರೆಯಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿ ಒಬ್ಬ ಪೋಲೀಸರ ಜೊತೆ ಬಹಳ ಗಲಾಟೆ ಮಾಡಿದ್ದಾನೆ . ಈ ವ್ಯಕ್ತಿ ಒಬ್ಬ ಆಟೋ ಚಾಲಕನಾಗಿದ್ದು ಈತನ ಹೆಸರು ಇನ್ನು ಬೆಳಕಿಗೆ ಬಂದಿಲ್ಲ . ಮಾತಿಗೆ ಮಾತು ಬೆಳೆದು ಕೊನೆಗೆ ಆತ ಪೋಲೀಸರ ಜೊತೆ ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಬರುತ್ತಾನೆ . ಕುಡಿದ ಮತ್ತಿನಲ್ಲಿ ಗಾಡಿ ಚಲಾಯಿಸುವುದೇ ಅಪರಾಧ ಅಂತಹುದರಲ್ಲಿ ಈ ವ್ಯಕ್ತಿ ಪೋಲೀಸರ ಮೇಲೆ ಕೈ ಮಾಡಿದ್ದಾನೆ . ಪೊಲೀಸರು ಸಹ ಈತನಿಗೆ ಸರಿಯಾಗಿ ಥಳಿಸಿದ್ದಾರೆ . ಕೊನೆಗೆ ಒಬ್ಬ ದಾರಿಹೋಕ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಪ್ರಯತ್ನಿಸಿದ್ದಾನೆ . ಕುಡಿದ ಮತ್ತಿನಲ್ಲಿ ಆ ಆಟೋ ಚಾಲಕ ಓರ್ವ ಪೊಲೀಸ್ ವ್ಯಕ್ತಿಗೆ ಕಚ್ಚಿದ್ದಾನೆ ಎಂದು ಹೇಳಲಾಗ್ತಿದೆ . ಕೊನೆಗೆ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ .
A video showing an inebriated man assaulting traffic policemen and getting thrashed in turn in now going viral. The undated video from Davangere of Karnataka shows policemen and a visibly drunk man fight it out ugly in public.