ಬಿಜೆಪಿ ಹಾಗು ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

Oneindia Kannada 2017-12-07

Views 211

BJP leaders have not done any kind of developmental work, they are only known for speeches, Siddaramaiah has lambasted the opposition leaders in Karwar. He also said Uttara Kannada people are secular, they don't want Parivarthana rally.

ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡೋರಲ್ಲ. ಕೇವಲ ಭಾಷಣ ಬಿಗಿಯೋರು. ರಾಜಕೀಯ ಅಂದ್ರೆ ಧರ್ಮ ಪರಿಪಾಲನೆ ಮಾಡೋದು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡೋದು ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಯಾಯ್ದಿದ್ದಾರೆ. ಉತ್ತರಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಅವರು ಬುಧವಾರ ಭಟ್ಕಳದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಲೇ ಬಿಜೆಪಿಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಎಲ್ಲ ಧರ್ಮ, ಜಾತಿಯವರನ್ನು ಒಟ್ಟಿಗೆ ತೆಗೆದುಕೊಳ್ಳುವುದು, ಎಲ್ಲ ಜನರಿಗೆ ಸಮಾನ ಅವಕಾಶ ಕಲ್ಪಿಸಿಕೊಡುವ ಮನೋಧರ್ಮವೇ ರಾಜಧರ್ಮ. ಬಿಜೆಪಿಯವರು ಪ್ರತೀ ಭಾಷಣದಲ್ಲಿ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಅಂತಾರೆ. ಒಂದು ಧರ್ಮ, ಜಾತಿಯನ್ನು ಹೊರಗಿಟ್ಟು ಬರೀ ಬಾಯಿ ಮಾತಲ್ಲಿ ಅದನ್ನು ಹೇಳೋದು ಡೋಂಗಿತನ ಅಲ್ವೇ? ಇಂಥ ಡೋಂಗಿಗಳನ್ನು ಜನತೆ ತಿರಸ್ಕಾರ ಮಾಡಬೇಕು ಎಂದು ಕೆಂಡಿ ಕಾರಿದರು.

Share This Video


Download

  
Report form
RELATED VIDEOS