ಪ್ರೇಮ ಬರಹದಲ್ಲಿ ಅರ್ಜುನ್ ಸರ್ಜಾ ಕುಟುಂಬದ ಜೊತೆ ದರ್ಶನ್ ಸಾಥ್ | Filmibeat Kannada

Filmibeat Kannada 2017-12-06

Views 1.4K

Challenging star Darshan to be a part of Arjun Sarja's Prema Baraha movie. Darshan shares screen with Arjun Sarja family in this movie.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಪ್ರೇಮ ಬರಹ' ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರೋದಕ್ಕೆ ಸಿದ್ದವಾಗುತ್ತಿದೆ. ನಟಿ ಐಶ್ವರ್ಯ ಸರ್ಜಾರನ್ನ ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸುತ್ತಿರುವ ಅರ್ಜುನ್ ಸರ್ಜಾ, ಸಿನಿಮಾವನ್ನ ವಿಭಿನ್ನವಾಗಿ ಪ್ರಮೋಷನ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಭಿಮಾನಿಗಳಿಗೆ ಟ್ಯೂನ್ ಸ್ಮ್ಯಾಶ್ ಕಾಂಪಿಟೇಷನ್ ಕೊಟ್ಟು ಒಂದು ಹಾಡನ್ನ ಅವರಿಂದಲೇ ಬರೆಸಿರುವ ಅರ್ಜುನ್ ಸರ್ಜಾ 'ಪ್ರೇಮ ಬರಹ' ಸಿನಿಮಾದ ಕೊನೆಯ ಹಾಡಿನ ಚಿತ್ರೀಕರಣ ಮಾಡಲು ಸಿದ್ದತೆ ನಡೆಸಿದ್ದಾರೆ. ವಿಶೇಷ ಅಂದರೆ ಈ ಹಾಡಿನಲ್ಲಿ ತೂಗುದೀಪ ಫ್ಯಾಮಿಲಿಯ ಚಾಲೆಂಜಿಂಗ್ ಸ್ಟಾರ್ ಹಾಗೂ ಸರ್ಜಾ ಕುಟುಂಬದ ಮೂವರು ನಾಯಕರು ಭಾಗಿಯಾಗಲಿದ್ದಾರೆ.ಐಶ್ವರ್ಯ ಸರ್ಜಾ ಹಾಗೂ ಚಂದನ್ ಅಭಿನಯದ 'ಪ್ರೇಮ ಬರಹ' ಸಿನಿಮಾದ ಕೊನೆಯ ಹಾಡಿನ ಚಿತ್ರೀಕರಣ ಮಾಡಲು ಸಿನಿಮಾತಂಡ ತಯಾರಿ ಮಾಡಿಕೊಂಡಿದೆ. ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಅರ್ಜುನ್ ಸರ್ಜಾ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ.

Share This Video


Download

  
Report form
RELATED VIDEOS