ನಮ್ಮ ಹಿಂದಿನ ಪ್ರಧಾನ ಮಂತ್ರಿಗಳನ್ನು ನೋಡಿ, ಆರಾಮವಾಗಿ ಮನೆಯಲ್ಲಿದ್ದು ಎಲ್ಲ ಸೌಕರ್ಯಗಳನ್ನು ಅನುಭವಿಸುತ್ತಿದ್ದಾರೆ. ಸರಕಾರವೇ ಅವರಿಗೆ ಎಲ್ಲ ಸವಲತ್ತು ಕೊಟ್ಟು ಬಿಳಿಯಾನೆಯ ಹಾಗೆ ಸಾಕುತ್ತಿದೆ. ಆದರೆ ಈ ಮನುಷ್ಯ ಹುಚ್ಚು ನಾಯಿ ಸುತ್ತಿದ ಹಾಗೆ ಇಡೀ ರಾಜ್ಯದಲ್ಲಿ ಸುತ್ತಾಡುತ್ತಿದ್ದಾರಲ್ರೀ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೊಗಳಿದರು. ಇದು ಖಂಡಿತಾ ಹೊಗಳಿಕೆ. ಮಾಜಿ ಪ್ರಧಾನಿ- ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಬಗ್ಗೆ ಶ್ರೀನಿವಾಸ್ ಹೊಗಳಲು ಬಳಸಿದ ಮಾತಿದು. ಜೆಡಿಎಸ್ ಸಂಘಟನೆಗಾಗಿ ದೇವೇಗೌಡರು ರಾಜ್ಯದಾದ್ಯಂತ ಸುತ್ತಾಡುತ್ತಿದ್ದಾರೆ ಎಂದು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಸಭೆಯೊಂದರಲ್ಲಿ ಜನರ ಮುಂದೆ ಹೇಳಿದ ಮಾತಿದು. ನಾನು ಹಾಗೂ ಪಿ.ಆರ್.ಸುಧಾಕರ್ ಲಾಲ್ ಜನರ ಕೆಲಸಗಳನ್ನು ಮಾಡಿಕೊಡುವ ಸಲುವಾಗಿ ಹುಚ್ಚುನಾಯಿಯ ಥರ ಸುತ್ತಾಡುತ್ತಿದ್ದೀವಿ ಎಂದು ಕೂಡ ಹೇಳಿದರು. ಅವರ ಭಾವನೆಯೇನೋ ಜನರಿಗೆ ಅರ್ಥವಾಯಿತು. ಆದರೆ ಬಳಸಿದ ಭಾಷೆ ಚರ್ಚೆಗೆ ಕಾರಣವಾಗಿದೆ.
S R Srinivas recently in a meeting at Tumkur slipped his tongue while praising our ex prime minister in a full go during his speech.