ಯಾವುದೇ ಸೆಲಿಬ್ರಿಟಿಗಳಾಗಲಿ ಸಾಮಾನ್ಯ ಜನರನ್ನು ಸ್ಫೂರ್ತಿಗೊಳಿಸುವಂತಿರಬೇಕು. ಅದರಲ್ಲೂ ಸಿನಿಮಾ ಸ್ಟಾರ್ ಗಳಾದರೆ ತಮ್ಮ ಬಗ್ಗೆ ತಾವು ಹೆಚ್ಚಿಗೆ ಕೇರ್ ತೆಗೆದುಕೊಳ್ಳಬೇಕಾಗುತ್ತೆ. ಬಿಗ್ ಸ್ಕ್ರೀನ್ ಮೇಲೆ ಮಿಂಚುವವರ ಆರೋಗ್ಯ ಮತ್ತು ಫಿಟ್ ನೆಸ್ ತುಂಬಾ ಚೆನ್ನಾಗಿ ಇರಬೇಕು. ಇನ್ನು ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸ್ , ಸ್ಟಂಟ್ಸ್ ಎಲ್ಲದರಲ್ಲೂ ಪರ್ಫೆಕ್ಟ್ ಎನ್ನಿಸಿಕೊಂಡಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಯಸ್ಸು ನಲವತ್ತು ದಾಟಿದ್ರು ಕೂಡ ಇನ್ನೂ ಫಿಟ್ ಅಂಟ್ ಫೈನ್ ಆಗಿದ್ದಾರೆ. ಅದೆಷ್ಟೋ ಹುಡುಗರು ಇವರನ್ನು ನೋಡಿ ಇವರಂತೆ ಇರಬೇಕಪ್ಪಾ, ಫಿಟ್ ಅಂದ್ರೆ ಹಿಂಗೇ ಇರಬೇಕು ಎನ್ನುವ ಆಸೆಗಳನ್ನು ಕಟ್ಟಿಕೊಂಡಿದ್ದಾರೆ. ಕರುನಾಡ ಅಪ್ಪು ಇಷ್ಟು ಫಿಟ್ ಆಗಿರುವುದರ ಹಿಂದೆ ಒಂದು ಬಿಗ್ ಸೀಕ್ರೆಟ್ ಇದೆ. ಮುಂದೆ ಓದಿ...ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಸಖತ್ ಫಿಟ್ ಆಗಿದ್ದಾರೆ. ಬೆಳ್ಳಿ ಪರದೆ ಮೇಲೆ ತಮ್ಮನ್ನು ತಾವು ಚೆನ್ನಾಗಿ ಕಾಣಿಸಿಕೊಳ್ಳುವಂತೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ವಯಸ್ಸು ನಲವತ್ತು ದಾಟಿದ್ರು ಕೂಡ ನೋಡುಗರನ ಇಂಪ್ರೆಸ್ ಮಾಡುವಂತಿದ್ದಾರೆ,..ಪುನೀತ್ ರಾಜ್ ಕುಮಾರ್ ರ ನಗು ಪ್ರತಿಯೊಬ್ಬ ಸಿನಿಮಾ ಅಭಿಮಾನಿಗೂ ಇಷ್ಟವಾಗುತ್ತೆ. ಸದಾ ಹಸನ್ಮುಖಿಯಾಗಿರುವುದು ಕೂಡ ಅಪ್ಪು ಅವ್ರ ಫಿಟ್ ನೆಸ್ ಸೀಕ್ರೆಟ್ ಅಂದರೆ ತಪ್ಪಿಲ್ಲ. ನಿಮ್ಮ ಯೌವನದ ಸೀಕ್ರೆಟ್ ಏನು ಅಂದ್ರೆ ಪುನೀತ್ ಮುಖದಲ್ಲಿ ಮೊದಲಿಗೆ ಕಾಣುವುದು ನಗು ಮಾತ್ರ.
Kannada Actor Puneet Rajkumar has done a lot of exercises and yoga everyday and is still fit for it.,. watch this video