ಬೆಂಗಳೂರು ನಗರದ ರೈಲು, ಬಸ್ ನಿಲ್ದಾಣ ಮತ್ತು ಮಾರುಕಟ್ಟೆಗಳಲ್ಲಿ ಶೀಘ್ರವೇ ಉಚಿತ ವೈ-ಫೈ ಸೌಲಭ್ಯ ಸಿಗಲಿದೆ. ವೈ-ಫೈ ಸೌಲಭ್ಯ ಒದಗಿಸುವಂತೆ ಬಿಬಿಎಂಪಿ ಮೇಯರ್ ಆದೇಶ ನೀಡಿದ್ದಾರೆ. ಮಂಗಳವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಗರದಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಕುರಿತು ಚರ್ಚೆ ನಡೆದಿದೆ. 'ಐಟಿ ರಾಜಧಾನಿ ಎನಿಸಿರುವ ಬೆಂಗಳೂರು ನಗರದಲ್ಲಿಯೇ ವೈ-ಫೈ ಸೌಲಭ್ಯ ಕಲ್ಪಿಸಿಲ್ಲ' ಎಂದು ಮೇಯರ್ ಸಂಪತ್ ರಾಜ್ ಹೇಳಿದರು. 'ರಾಮನಗರ, ಚನ್ನಪಟ್ಟಣದಲ್ಲಿ ವೈ-ಫೈ ಸೌಲಭ್ಯವಿದೆ. ಬೆಂಗಳೂರು ನಗರದ ಬಸ್, ರೈಲ್ವೆ ನಿಲ್ದಾಣ ಮತ್ತು ಮಾರುಕಟ್ಟೆಗಳಲ್ಲಿ ಸೌಲಭ್ಯವನ್ನು ಕಲ್ಪಿಸಿ' ಎಂದು ಮೇಯರ್ ಪಾಲಿಕೆ ಆಯುಕ್ತರಿಗೆ ಆದೇಶಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಮಾಹಿತಿ ತಂತ್ರಜ್ಞಾನ ಸಲಹೆಗಾರ ಟಿ.ಶೇಷಾದ್ರಿ ಅವರು, 'ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವೈ-ಫೈ ಸೌಲಭ್ಯವಿದೆ. ಅಧಿಕಾರಿಗಳ ಬಳಕೆಗೆ ಮಾತ್ರ ಸೀಮಿತವಾಗಿದೆ. ನಗರದೆಲ್ಲೆಡೆ ಸೌಲಭ್ಯ ಕಲ್ಪಿಸಲು ಇ-ಆಡಳಿತ ಇಲಾಖೆ ಜೊತೆ ಚರ್ಚೆ ನಡೆಸಲಾಗುತ್ತದೆ' ಎಂದರು.
Banglore people will very shortly be enjoying free wifi acess at city bus stand , railway station and market