'ಪ' ಅಕ್ಷರಕ್ಕಿದ್ಯಾ ಅಷ್ಟೊಂದು ಪವರ್: ಯಾಕಿಷ್ಟು ಸುದ್ದಿ? ಏನಿದು ವಿವಾದ? ಕೆಲವು ಹೆಸರುಗಳು, ಕೆಲವು ವ್ಯಕ್ತಿಗಳೇ ಹಾಗೇ... ಸದಾ ಸುದ್ದಿಯಲ್ಲಿರ್ತಾರೆ. ಅಷ್ಟೇ ಯಾಕೆ ಇವ್ರು ವಿವಾದದಿಂದಲೋ ಅಥವಾ ಒಳ್ಳೆಯ ಸುದ್ದಿಯಿಂದಲೋ ಸದಾ ಸುದ್ದಿಯಲ್ಲಿ ಮಾತ್ರ ಇರ್ತಾರೆ. ಸದ್ಯ ಈಗ ಸುದ್ದಿಯಲ್ಲಿರೋದು 'ಪ' ಅಕ್ಷರದಲ್ಲಿ ಪ್ರಾರಂಭವಾಗುವ ಹೆಸರು ಮತ್ತು ಆ ಪದದಿಂದ ಹೆಸರುಳ್ಳ ವ್ಯಕ್ತಿಗಳು. ಅಷ್ಟಕ್ಕೂ, ಈ ಹೆಸರುಗಳು ಯಾಕೆ ಸದಾ ಚಾಲ್ತಿಯಲ್ಲಿರುತ್ತೆ.? ಈ ಪದದಿಂದ ಬರುವ ಸಿನಿಮಾಗಳಾಗಲಿ, ವ್ಯಕ್ತಿಗಳಾಗಳಿ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ತಾರಾ.? ಸದ್ಯ ಈಗ 'ಟಾಕ್ ಆಫ್ ದಿ ಟೌನ್' ಆಗಿರುವ ಆ ವ್ಯಕ್ತಿಗಳು ಮತ್ತು ಸಿನಿಮಾಗಳು ಯಾವುದು? ದೀಪಿಕಾ ಸಿನಿಮಾಗೆ ಈ ಹೆಸರಿಟ್ಟಾಗಿನಿಂದಲೂ ಸಿನಿಮಾ ಬಗ್ಗೆ ಒಂದಲ್ಲಾ ಒಂದು ಸುದ್ದಿ ಆಗುತ್ತಲೇ ಇದೆ. ವಿವಾದಗಳಿಂದಲೋ ಅಥವಾ ಸಿನಿಮಾದ ಪ್ರಾಮುಖ್ಯತೆಯಿಂದಲೋ ಒಟ್ಟಾರೆ ಆರಂಭದಿಂದಲೂ ಪದ್ಮಾವತಿ ಹೆಸರು ಮಾತ್ರ ಚಾಲ್ತಿಯಲ್ಲಿದೆ.