ಅಪ್ಪಾ.. ಐ ಲವ್ ಯು ಪಾ' ಹಾಡಿಗೆ ಭಾವುಕರಾದ ಕ್ರೇಜಿ ಸ್ಟಾರ್ ರವಿಚಂದ್ರನ್ | Filmibeat Kannada

Filmibeat Kannada 2017-11-24

Views 1.6K

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಉದಯ ಸಿಂಗರ್ ಜೂನಿಯರ್ಸ್' ಕಾರ್ಯಕ್ರಮ ಕನ್ನಡಿಗರಿಗೆ ಮೆಚ್ಚುಗೆ ಆಗಿದೆ. ನಿರ್ಣಾಯಕರಾದ ರವಿಚಂದ್ರನ್ ಮತ್ತು ಮನೋ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹಾಗೆ, ಹಾಡನ್ನು ಹಾಡಿ ವೇದಿಕೆಯ ಮೇಲೆ ಸಂಗೀತದ ರಸದೌತಣವನ್ನು ನೀಡುವ ಮೂಲಕ ಮಕ್ಕಳು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಪ್ರತಿ ವಾರವೂ ಕೂಡ ಒಂದೊಂದು ವಿಷಯದ ಮೇಲೆ ಶೋ ನಿರ್ಮಾಣವಾಗುತ್ತಿದೆ. ಅಂತೆಯೇ, ಈ ವಾರ ನಿಮಗೆ "ಇಷ್ಟವಾದ ಹಾಡು" ಎಂಬ ವಿಷಯದ ನೀಡಲಾಗಿದ್ದು, ಸ್ಪರ್ಧಿಗಳು ತಮಗೆ ಇಷ್ಟವಾದ ಹಾಡುಗಳನ್ನು ಆಯ್ಕೆಮಾಡಿಕೊಂಡು ಹಾಡಬೇಕು.ಸಿರಿ ಎಂಬ ಸ್ಪರ್ಧಿ ತನಗೆ ತನ್ನ ತಂದೆ ಕಂಡರೆ ಇಷ್ಟ ಎಂದು 'ಚೌಕ' ಚಲನಚಿತ್ರದ "ಅಪ್ಪಾ ಐ ಲವ್ ಯು ಪಾ" ಹಾಡನ್ನು ತಮ್ಮ ತಂದೆಗೋಸ್ಕರ ಹಾಡಿದಾಗ ಆ ಹಾಡನ್ನು ಕೇಳುತ್ತಿದ್ದಂತೆಯೇ, ಕ್ರೇಜಿಸ್ಟಾರ್ ರವಿಚಂದ್ರನ್ ಭಾವುಕರಾದರು. ಇದೇ ಸಂದರ್ಭದಲ್ಲಿ ತಮ್ಮ ತಂದೆಯನ್ನು ನೆನಪಿಸಿಕೊಂಡು ಅವರಿಬ್ಬರ ಒಡನಾಟದ ಬಗೆಗೆ ಹಂಚಿಕೊಂಡರು.ರವಿಚಂದ್ರನ್ ಏನೇ ಕೇಳಿದರೂ, ಎಷ್ಟೇ ದುಡ್ಡನ್ನು ಕೇಳಿದರೂ ಯಾವುದಕ್ಕೂ ಪ್ರಶ್ನೆ ಮಾಡದೆ ಅವರ ತಂದೆ ಕೊಡುತ್ತಿದ್ದರಂತೆ.ಅಷ್ಟೇ ಅಲ್ಲದೇ, ''ನನ್ನಲ್ಲಿ ಯಾವುದೇ ಟ್ಯಾಲೆಂಟ್ ಇಲ್ಲ, ಯಾವುದೇ ರೀತಿ ಕ್ರಿಯೇಟಿವಿಟಿ ಇಲ್ಲ. ಆದರೂ ನನ್ನ ತಂದೆ ನನ್ನ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಇವತ್ತು ಅವರು ನಮ್ಮ ಮಧ್ಯೆ ಇಲ್ಲವಾದರೂ ನನ್ನ ಒಳಗಡೆ ಯಾವತ್ತೂ ಇದ್ದೇ ಇರುತ್ತಾರೆ. ನನ್ನ ತಂದೆಯೇ ಗ್ರೇಟ್ ಎಂದು ತಮ್ಮ ತಂದೆಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಹಾಗೆ ಕ್ರೇಜಿಸ್ಟಾರ್ ತಂದೆಯನ್ನು ಕಂಡರೆ ಹೆದರುತ್ತಿದ್ದರಾ? ಕತೆ ಹೇಳುತ್ತಾ ಅವರ ತಂದೆ ಕಣ್ಣೀರಿಟ್ಟಿದ್ದು ಏಕೆ? ಇವೆಲ್ಲವನ್ನು ರವಿಚಂದ್ರನ್ ಅವರ ಮೂಲಕ ತಿಳಿಯೋಣ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುವ "ಉದಯ ಸಿಂಗರ್ ಜೂನಿಯರ್ಸ್" ನಲ್ಲಿ.

Crazy Star V.Ravichandran becomes emotional in Udaya Singer Juniors reality show..watch this video

Share This Video


Download

  
Report form
RELATED VIDEOS