ಪುಟ್ಟಗೌರಿ' ಧಾರಾವಾಹಿಯಲ್ಲಿ ದೊಡ್ಡ ತಿರುವು; ಗೌರಿ ಇನ್ಮುಂದೆ ಕರೀಷ್ಮಾ |FIlmibeat Kannada

Filmibeat Kannada 2017-11-16

Views 1.3K

ಪುಟ್ಟಗೌರಿ ಮದುವೆ' ಧಾರಾವಾಹಿಯ ದಿನಕ್ಕೊಂದು ರೋಚಕತೆ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಗೌರಿಯ ಕಷ್ಟ ನೋಡಿ ಬೇಜಾರು ಮಾಡಿಕೊಳ್ಳುತ್ತಿದ್ದ ವೀಕ್ಷಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಹೌದು, ಪುಟ್ಟಗೌರಿ ಧಾರಾವಾಹಿಗೆ ಹೊಸ ತಿರುವು ಸಿಕ್ಕಿದ್ದು, ಗೌರಿ ಇನ್ಮುಂದೆ ಕರೀಷ್ಮಾ ಆಗಿ ಬದಲಾಗಿದ್ದಾರೆ. ಈ ಮೂಲಕ ಪುಟ್ಟಗೌರಿ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ಅಷ್ಟಕ್ಕೂ, ಗೌರಿ ಯಾಕೆ ಕರೀಷ್ಮಾ ಆದರು? ಈ ಕರೀಷ್ಮಾ ಯಾರು? ಪುಟ್ಟಗೌರಿ ಧಾರಾವಾಹಿಗೆ ಸಿಕ್ಕ ತಿರುವು ಏನು ಎಂಬುದು ತಿಳಿಯಲು ಮುಂದೆ ಓದಿ.....ಇನ್ಮುಂದೆ ನಿಮಗೆ ಪುಟ್ಟಗೌರಿ ದರ್ಶನ ಕೊಡುವುದು ಕಮ್ಮಿ ಆಗುತ್ತೆ. ಯಾಕಂದ್ರೆ, ಗೌರಿ ಸಂಪೂರ್ಣವಾಗಿ ಬದಲಾಗಿದ್ದಾಳೆ. ಇಷ್ಟು ದಿನ ನೀವು ನೋಡಿದ ಗೌರಿ ಬರಲ್ಲ. ಮಾಡ್ರನ್ ಲುಕ್ ನಲ್ಲಿರುವ ಗೌರಿ ಬರ್ತಾರೆ.ಅಂದ್ಹಾಗೆ, ಗೌರಿ ಡಬಲ್ ಶೇಡ್ ನಲ್ಲಿ ಪಾತ್ರ ನಿರ್ವಹಿಸಲಿದ್ದು, ಹೊಸ ಗೆಟಪ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತನ್ನ ಹೆಸರು ಕೂಡ ಬದಲಾಯಿಸಿಕೊಂಡಿದ್ದು, ಕರೀಷ್ಮಾ ಎಂದು ಬಿಂಬಿಸಿಕೊಂಡಿದ್ದಾರೆ.ಗೌರಿ ಕೇವಲ ಗೆಟಪ್, ಲುಕ್ ಮಾತ್ರ ಬದಲಾಯಿಸಿಕೊಂಡಿಲ್ಲ. ಮಾತಿನ ಶೈಲಿ ಕೂಡ ಬದಲಿಸಿಕೊಂಡಿದ್ದಾರೆ. ಕನ್ನಡದ ಅಪ್ಪಟ ಹುಡುಗಿಯಾಗಿದ್ದ ಗೌರಿ ಈಗ ಫುಲ್ ಇಂಗ್ಲೀಷ್ ನಲ್ಲಿ ಫಟಾಫಟ್ ಅಂತ ಮಾತನಾಡುತ್ತಿದ್ದಾರೆ.

putta gowri serial has a big turning point,. Gauri Introduced Karisma part.watch this video.

Share This Video


Download

  
Report form
RELATED VIDEOS