ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ | Oneindia Kannada

Oneindia Kannada 2017-11-11

Views 3.6K

ಹಣಕಾಸು ಸಚಿವ ಅರುಣ್‌ ಜೈಟ್ಲಿ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಸರಿ ಸುಮಾರು 177ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಎಲ್ಲಾ ರೆಸ್ಟೋರೆಂಟ್ ಮೇಲಿನ ಜಿಎಸ್ ಟಿಯನ್ನು ಶೇ5ಕ್ಕೆ ಮಿತಿಗೊಳಿಸಲಾಗಿದೆ. ತೆರಿಗೆ ಇಳಿಕೆಯಿಂದ ಬೆಲೆ ಕಡಿಮೆಯಾದ ಸಾಮಾಗ್ರಿಗಳ ಪೂರ್ಣ ವಿವರ ಇಲ್ಲಿದೆ. ಗುವಾಹತಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ 23ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪ್ರಮುಖವಾಗಿ, ಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗಿದೆ. ಶೇ 28ರಿಂದ ಶೇ 18ರ ಸ್ಲ್ಯಾಬಿಗೆ 177ಕ್ಕೂ ಅಧಿಕ ವಸ್ತುಗಳನ್ನು ತರಲಾಗಿದೆ. * ಇನ್ನು ಕೆಲವು ಸಾಮಾಗ್ರಿಗಳ ತೆರಿಗೆಯನ್ನು ಶೇ 28ರಿಂದ ಶೇ 12ಕ್ಕೆ ಇಳಿಸಲಾಗಿದೆ. * ಶೇ 18ರಿಂದ ಶೇ 12ಕ್ಕೆ ಹಲವು ಸಾಮಾಗ್ರಿಗಳು ಸೇರಿವೆ. * ಶೇ 12 ರಿಂದ ಶೇ 5 ಕೆಲ ವಸ್ತುಗಳು ಸೇರಿಕೊಂಡಿವೆ.

Arun jaitley has come up with an update of GST and it does look good . The list of items that are affected by the new update has been shown in the video.

Share This Video


Download

  
Report form
RELATED VIDEOS