ಹನ್ನೆರಡು ವರ್ಷಗಳ ನಂತರ ಮತ್ತೆ ಒಂದಾದ ಸುಮಲತಾ ಅಂಬರೀಶ್ ಹಾಗು ಅಜಯ್ ರಾವ್ | Filmibeat Kannada

Filmibeat Kannada 2017-11-09

Views 739

ಹನ್ನೆರಡು ವರ್ಷದ ನಂತರ ಒಂದಾದ ತಾಯಿ-ಮಗ. ಚಿತ್ರರಂಗದ ತಾಯಿ ಮಗ ಒಂದಾಗಿದ್ದಾರೆ. ಬರೋಬ್ಬರಿ ಹನ್ನೆರಡು ವರ್ಷದ ನಂತ್ರ ಇವರಿಬ್ಬರು ಮತ್ತೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತಿದ್ದಾರೆ. ನಾವೀಗ ಹೇಳೋದಕ್ಕೆ ಹೊರಟಿರೋದು 'ತಾಯಿಗೆ ತಕ್ಕ ಸಿನಿಮಾ'ದ ಕಲಾವಿದರ ಬಗ್ಗೆ. ಸೆಟ್ಟೇರವುದಕ್ಕೆ ಸಿದ್ದವಾಗಿರುವ 'ತಾಯಿಗೆ ತಕ್ಕ ಮಗ' ಸಿನಿಮಾದ ಕಲಾವಿದರ ಆಯ್ಕೆ ಭರದಿಂದ ಸಾಗಿದೆ. 'ಅಜಯ್ ರಾವ್' ಅಭಿನಯದ 'ತಾಯಿಗೆ ತಕ್ಕ ಮಗ' ಚಿತ್ರ ಶಶಾಂಕ್ ಸಿನಿಮಾಸ್ ನಿರ್ಮಾಣದಲ್ಲಿ ಪ್ರಾರಂಭವಾಗುತ್ತಿದ್ದು, ಚಿತ್ರಕ್ಕೆ ಹೊಸ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ.'ಎಕ್ಸ್‌ ಕ್ಯೂಸ್ ಮಿ' ಚಿತ್ರದಲ್ಲಿ ಸುಮಲತಾ, ಅಜಯ್ ರಾವ್ ಗೆ ತಾಯಿ ಪಾತ್ರವನ್ನ ನಿರ್ವಹಿಸಿದ್ದರು. ನಂತರ ಇಬ್ಬರು ಕಲಾವಿದರು ಯಾವುದೇ ಚಿತ್ರದಲ್ಲಿ ಒಟ್ಟಿಗೆ ನಟಿಸಿರಲಿಲ್ಲ. ಈಗ ಅಜಯ್ ಮತ್ತೆ 'ಸುಮಲತಾ' ಅವ್ರಿಗೆ ಮಗನಾಗಿ ಅಭಿನಯಿಸಲಿದ್ದಾರೆ.ಶಶಾಂಕ್ ಸಿನಿಮಾಸ್ ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ 'ತಾಯಿಗೆ ತಕ್ಕ ಮಗ'. ಸಿನಿಮಾವನ್ನ ನವ ನಿರ್ದೇಶಕ ವೇದ್ ಗುರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗಾಗಿ ಅಜಯ್ ರಾವ್ ಗೆಟಪ್ ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
After 12 years, Sumalatha and Ajay Rao join hands for 'Thayige Takka Maga' movie.

Share This Video


Download

  
Report form
RELATED VIDEOS