'ಟಗರು' ಕಾರ್ಯಕ್ರಮಕ್ಕೆ ಬಂದಿದ್ದ ಅಲ್ಲು ಅರ್ಜುನ್ ಸಹೋದರನ ಆಸೆ ಏನು? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಯಿತು. 'ಟಗರು' ಟೀಸರ್ ರಿಲೀಸ್ ಮಾಡಲು ಭಾರತದ ಮಾಜಿ ಕ್ರಿಕೆಟ್ ಆಟಗಾರ ಜಿ.ಆರ್ ವಿಶ್ವನಾಥ್, ನಟ ರಕ್ಷಿತ್ ಶೆಟ್ಟಿ ಹಾಗೂ ತೆಲುಗು ನಟ ಅಲ್ಲು ಸಿರೀಶ್ ಅತಿಥಿಗಳಾಗಿ ಆಗಮಿಸಿದ್ದರು. 'ಟಗರು' ಚಿತ್ರದ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೇದಿಕೆಯಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿ ಅಭಿಮಾನಿಗಳನ್ನ ರಂಜಿಸಿದರು. ತದ ನಂತರ ಕನ್ನಡದಲ್ಲೇ ಮಾತನಾಡಿದ ತೆಲಗು ನಟ ಸ್ಯಾಂಡಲ್ ವುಡ್ ನಲ್ಲಿ ತಮಗಿರುವ ಆಸೆಯೊಂದನ್ನ ವ್ಯಕ್ತಪಡಿಸಿದರು. ಈ ಆಸೆ ಕೇಳಿ ಅಭಿಮಾನಿಗಳು ಫುಲ್ ಖುಷ ಆದರು. ಏನದು? ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆಯನ್ನ ಟಗರು ವೇದಿಕೆಯಲ್ಲಿ ವ್ಯಕ್ತಪಡಿಸಿದರು.