ಇಂದು ಭಾರತ ಹಾಗು ನ್ಯೂ ಜಿಲಂಡ್ ಟಿ ೨೦ ಸರಣಿಯ ನಿರ್ಣಾಯಕ ಪಂದ್ಯ ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿ ಅತ್ಯಂತ ರೋಚಕ ಹಂತಕ್ಕೆ ಬಂದು ತಲುಪಿದ್ದು ಪಂದ್ಯ ಗೆಲ್ಲುವ ಹುಮ್ಮಸ್ಸಿನೊಂದಿಗೆ ಎರೆಡು ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಪಂದ್ಯಕ್ಕೆ ವರುಣ ರಾಯ ಅಡ್ಡಗಾಲು ಹಾಕುವ ಸಂಭವ ಹೆಚ್ಚಿದೆ . ವಿರಾಟ್ ಪಡೆಗೆ ಟೀ ೨೦ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಕಿವೀಗಳನ್ನು ಸೋಲಿಸಲು ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲೇ ಬೇಕಾದ ಪರಿಸ್ಥಿತಿ . ಒಟ್ಟಾರೆ ಮಳೆರಾಯ ಇಂದು ಶಾಂತಿಯಿಂದಿದ್ದರೆ ಒಂದು ಒಳ್ಳೆಯ ಪಂದ್ಯ ನಡೆಯುವದರಲ್ಲಿ ಸಂದೇಹವಿಲ್ಲ. ಹಿಂದಿನ ಸರಣಿಯಂತೆ ಈ ಸರಣಿ ಸಹ ಮಳೆಯಿಂದಾಗಿ ಡ್ರಾನಲ್ಲಿ ಮುಕ್ತಾಯ ಆಗದಿದ್ದರೆ ಸಾಕು . ಒಟ್ಟಿನಲ್ಲಿ ಗೆದ್ದು ಬಾ ಟೀಮ್ ಇಂಡಿಯಾ .
India face new zealand in a decider match. The winner gets to lift the trophy but only if rain permits.