ನವೆಂಬರ್ 19ರಂದು ಪ್ರಪಂಚ ಪ್ರಳಯ | ಕಮಲಾಕರ್ ಭಟ್ರು ಏನ್ ಹೇಳ್ತಾರೆ ಕೇಳಿ | Oneindia Kannada

Oneindia Kannada 2017-10-31

Views 300

David Meade has predicted that Doomsday will occur on November 19, Sunday. He says the Nibiru, black star will come in alignment with earth and the sun, causing huge earthquakes in many regions. Some have termed it as fairy tale by a mad person. Famous astrologer Dr. Kamalakar Bhat explains about Dooms Day. Watch Video.

ನವೆಂಬರ್ 19, ಭಾನುವಾರ ! ಇದು ಹಲವರ ಪಾಲಿಗೆ ಕ್ಯಾಲೆಂಡರ್ ಮೇಲಿರುವ ಒಂದು ಸಾಮಾನ್ಯ ಸಂಖ್ಯೆ, ಒಂದು ದಿನಾಂಕ ಮಾತ್ರ. ಜೋರಾಗಿ ಗಾಳಿಬೀಸಿ ಪಟಪಟ ಹಾರಿದರೆ ಆ ಒಂದು ದಿನದ ಪಟವೂ ಹಾರಿಹೋಗಲು ಎಷ್ಟು ಸಮಯ ಬೇಕು? ಆದರೆ, ಈ ದಿನ ಪ್ರಳಯದ ಮೇಲೆ ಅಪಾರ ನಂಬಿಕೆ ಇಟ್ಟವರಿಗೆ ಸಾಮಾನ್ಯ ದಿನವಾಗಿರಲಾರದು. ಏಕೆಂದರೆ, ಸೆಪ್ಟೆಂಬರ್ 23ರಂದು ಇಡೀ ವಿಶ್ವವೇ ಮುಳುಗಿಹೋಗುತ್ತದೆ ಎಂದು ಷರಾ ಬರೆದಿದ್ದ ಡೇವಿಡ್ ಮೇಡೆ ಎಂಬಾತ ಈಬಾರಿ ಪ್ರಳಯಕ್ಕೆ ಮತ್ತೊಂದು ದಿನಾಂಕವನ್ನು ನಿಗದಿ ಪಡಿಸಿದ್ದಾರೆ. ಅದೇ ನವೆಂಬರ್ 19.ನವೆಂಬರ್ 19ರಂದು ಭಾರೀ ಭೂಕಂಪಗಳಾಗಿಬಿಡುತ್ತವೆ, ಸುನಾಮಿಗಳೆದ್ದುಬಿಡುತ್ತವೆ, ಅಗ್ನಿಪರ್ವತ ಸಿಡಿಯುತ್ತದೆ, ಎಂದೂ ಕಂಡಿರದಂಥ ಅಗ್ನಿ ಅವಘಡ ಸಂಭವಿಸಿಬಿಡುತ್ತದೆ, ಬಿರುಗಾಳಿಯೆದ್ದು ರಾತ್ರೋರಾತ್ರಿ ಎಲ್ಲ ಸರ್ವನಾಶವಾಗಿಬಿಡುತ್ತದೆ ಎಂಬಿತ್ಯಾದಿಗಳನ್ನೇನೂ ಆತ ಹೇಳಿಲ್ಲ. ಆತ ಕೊಟ್ಟಿರುವುದು ಆ ದಿನಾಂಕ ಮಾತ್ರ. ಅಷ್ಟರಲ್ಲಿ, ದೇವರು ದಿಂಡರುಗಳಲ್ಲಿ ಅಪಾರ ನಂಬಿಕೆಯಿಟ್ಟಿರುವ ಹಲವಾರು ಪ್ರಳಯವಾದಿಗಳು, ಚಕಚಕನೆ ಟೆಲಿಸ್ಕೋರ್ ಹಿಡಿದು ವಿಜ್ಞಾನಿಗಳು ಬಿಟ್ಟಸ್ಥಳ ತುಂಬಲು ಆರಂಭಿಸಿದ್ದಾರೆ. ಭಯಂಕರ ಭೂಕಂಪಗಳು ಭೂಮಿಯನ್ನು ತಲ್ಲಣಿಸುವಂತೆ ಮಾಡುತ್ತವೆ ಎಂದು ಭವಿಷ್ಯ ನುಡಿಯಲು ಆರಂಭಿಸಲಾಗಿದೆ.

Share This Video


Download

  
Report form
RELATED VIDEOS