ರಶ್ಮಿಕಾ ಮಂದಣ್ಣ ಬಗ್ಗೆ ಹರಡಿರುವ ಗಾಸಿಪ್ ಗೆ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ | Filmibeat Kannada

Filmibeat Kannada 2017-10-26

Views 1.4K

ಅದೇನೋ ಗೊತ್ತಿಲ್ಲ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಆಗಾಗ ಕೆಲ ಗಾಸಿಪ್ ಗಳು ಕೇಳಿ ಬರುತ್ತಲೇ ಇರುತ್ತದೆ. ಅದೇ ರೀತಿ ಸದ್ಯ ರಶ್ಮಿಕಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡಿದೆ. 'ಆದಷ್ಟು ಬೇಗ ರಶ್ಮಿಕಾ ಸಿನಿಮಾ ರಂಗಕ್ಕೆ ಟಾಟಾ.. ಹೇಳುತ್ತಾರೆ' ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಜೊತೆಗೆ ಈ ಬಗ್ಗೆ ಕೆಲವು ಕಡೆ ವರದಿ ಕೂಡ ಆಗಿತ್ತು. ಬಳಿಕ ಈ ಸುದ್ದಿ ನಿಜಾನಾ.. ಹಾಗಾದರೆ 'ಕಿರಿಕ್ ಪಾರ್ಟಿ' ಸಾನ್ವಿ ಮುಂದೆ ಸಿನಿಮಾ ಮಾಡುವುದಿಲ್ವಾ..? ಎನ್ನುವ ಗೊಂದಲ ಅಭಿಮಾನಿಗಳದ್ದಾಗಿತ್ತು. ಆದರೆ ಈ ವದಂತಿಗೆ ನಟ ರಕ್ಷಿತ್ ಶೆಟ್ಟಿ ಫುಲ್ ಸ್ಟಾಪ್ ಹಾಕಿದ್ದಾರೆ. ರಶ್ಮಿಕಾ ಬಗ್ಗೆ ಬಂದಿರುವ ಸುದ್ದಿ ಬಗ್ಗೆ ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಚಿತ್ರರಂಗದಿಂದ ದೂರವಾಗುತ್ತಾರೆ. ಇದೇ ಕಾರಣದಿಂದ ಅವರು 'ಚಮಕ್' ಮತ್ತು 'ಅಂಜನೀಪುತ್ರ' ಚಿತ್ರದ ಶೂಟಿಂಗ್ ಮುಗಿದಿದ್ದರೂ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಹಾಗೂ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಚಿತ್ರಗಳಿಗೆ ರಶ್ಮಿಕಾ ಒಲವು ತೋರುತ್ತಿದ್ದಾರೆ'' ಎನ್ನುವ ಸುದ್ದಿ ಹರಿದಾಡಿತ್ತು.
A rumor has been spread about Rashmika Mandanna saying, she will not be seen in Kannada Movies anymore. But now Rakshith Shetty has taken his twitter account to give clarity about Rashmika Mandanna gossip.

Share This Video


Download

  
Report form
RELATED VIDEOS