On occasion of Dasara, special worship for Goddess Chamundi in Chamundi hills is taking place from 4am on Sep 21st. Watch this Exclusive interview of Shri Shashi Shekhar Dixit, Head Priest of Chamundi Temple. Head Priest explains about Dasara specialties.
ದಸರಾ ಹಿನ್ನೆಲೆಯಲ್ಲಿ ಇಂದು(ಸೆ.21) ಬೆಳಗಿನ ಜಾವ 4 ಗಂಟೆಯಿಂದಲೇ ಪುರೋಹಿತರು ಚಾಮುಂಡಿ ಬೆಟ್ಟದಲ್ಲಿ ಪೂಜಾ ವಿಧಿ ವಿಧಾನಗಳ ಸಿದ್ಧತೆಯಲ್ಲಿ ಮಗ್ನರಾಗಿದ್ದರು. ಪುರೋಹಿತರು ಚಾಮುಂಡೇಶ್ವರಿ ಮೂರ್ತಿಗೆ ಸ್ನಾನ ಮಾಡಿಸಿ ದೇವಿಗೆ ರೇಷ್ಮೆ ಸೀರೆ ಉಡಿಸಿದರು. ಬೆಳ್ಳಿ ರಥದಲ್ಲಿ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ಸಮಯದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕ ಭೇಟಿಗೆ ನಿರ್ಬಂಧ ಹೇರಲಾಗಿದೆ. 10 ದಿನ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಸೆ. 30 ರಂದು ಜಂಬೂಸವಾರಿ ನಡೆಯಲಿದೆ. ಇನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶಶಿ ಶೇಖರ್ ದೀಕ್ಷಿತ್ ರವರು ದಸರಾ ವಿಶೇಷತೆಗಳ ಬಗ್ಗೆ ಕೆಲವು ಮಾಹಿತಿಗಳನ್ನ ಕೊಟ್ಟಿರುವ ಈ ವಿಶೇಷ ಸಂದರ್ಶನದ ವೀಡಿಯೋ ಮಿಸ್ ಮಾಡದೇ ನೋಡಿ