Ravi Belagere Fall Sick Before Arrest | Filmibeat Kannada

Filmibeat Kannada 2017-06-27

Views 7

High drama unfolded at Dharwad on Saturday when Ravi Belagere, editor of Hai Bangalore, was admitted to SDM Hospital for chest pain after he got wind of information that the Banashankari police were arriving to arrest him following the resolution adopted in the Karnataka legislature against two journalists.

ಹಕ್ಕು ಬಾಧ್ಯತಾ ಸಮಿತಿ ಶಿಫಾರಸು ಹಿನ್ನಲೆಯಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ದಾಖಲಾಗಿದ್ದ ರವಿ ಬೆಳಗೆರೆ ನಾಪತ್ತೆಯಾಗಿದ್ದಾರೆ.ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ರೆ, ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಅನ್ನುತ್ತಿದ್ದಾರೆ ಧಾರವಾಡ ಪೊಲೀಸರು.


ಉತ್ತರ ಕನ್ನಡದ ಜೊಯಿಡಾ ತೋಟದ ಮನೆಯಲ್ಲಿ ಇದ್ದಾರೆ ಅನ್ನುವ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಕಳೆದ ಶನಿವಾರ ಅವರ ಬಂಧನಕ್ಕಾಗಿ ಪೊಲೀಸರು ತೆರಳಿದ್ದರು. ಅಷ್ಟು ಹೊತ್ತಿಗೆ ಬಿಪಿ,ಶುಗರ್ ಹೆಚ್ಚಾದ ಹಿನ್ನಲೆಯಲ್ಲಿ ಧಾರವಾಡದ ಆಸ್ಪತ್ರೆಗೆ ಬೆಳಗರೆ ದಾಖಲಾಗಿದ್ದರು.


ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ರು. ಟ್ರೀಟ್ ಮೆಂಟ್ ನಲ್ಲಿದ್ದ ಕಾರಣ ಬಂಧಿಸಲು ಸಾಧ್ಯವಾಗಲಿಲ್ಲ.ಶನಿವಾರ ಮತ್ತು ಭಾನುವಾರ ಆಸ್ಪತ್ರೆ ಬಾಗಿಲು ಕಾದ್ರು ಬಂಧಿಸಲು ಮಾತ್ರ ಸಾಧ್ಯವಾಗಲಿಲ್ಲ.ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಪೊಲೀಸರು ಬಂದ್ರೆ ಅಷ್ಟು ಹೊತ್ತಿಗೆ ರವಿ ಬೆಳಗೆರೆ ಡಿಸ್ಚಾರ್ಜ್ ಆಗಿದ್ರು.


Share This Video


Download

  
Report form
RELATED VIDEOS