ಚಾಮರಾಜನಗರದಲ್ಲಿ ಆರ್​ಎಸ್​ಎಸ್​ ಪಥಸಂಚಲನ: ನೂರಾರು ಮಂದಿ ಗಣವೇಷಧಾರಿಗಳು ಭಾಗಿ

ETVBHARAT 2025-10-19

Views 35

ಚಾಮರಾಜನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಚಾಮರಾಜನಗರದಲ್ಲಿ ವಿಜಯ ದಶಮಿ ಪಥಸಂಚಲನವು ವಿಜೃಂಭಣೆಯಿಂದ ಶನಿವಾರ ನಡೆಯಿತು.

ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಮಂದಿ ಗಣವೇಷಧಾರಿಗಳು ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ ಸಂತೇಮರಹಳ್ಳಿ ವೃತ್ತದಲ್ಲಿ ಪಥ ಸಂಚಲನ ನಡೆಸಿದರು. ತೆರೆದ ವಾಹನದಲ್ಲಿ ಭಾರತಾಂಬೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಂ ಹೆಡ್ಗೆವಾರ್, ಗುರೂಜಿ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್ ಭಾವಚಿತ್ರವಿಟ್ಟು ನಡೆದ ಮೆರವಣಿಗೆಯಲ್ಲಿ ಚಿಣ್ಣರು ಸೇರಿ ನೂರಾರು ಮಂದಿ ಶಿಸ್ತಿನ ಹೆಜ್ಜೆ ಹಾಕಿದರು‌.

ಮಾಜಿ ಶಾಸಕರಾದ ಸಿ.ಎಸ್.ನಿರಂಜನಕುಮಾರ್, ಬಾಲರಾಜ್ ಸೇರಿ ಬಿಜೆಪಿ ಮುಖಂಡರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಉತ್ಸಾಹದಿಂದ ಪಥ ಸಂಚಲನದಲ್ಲಿ ಭಾಗಿಯಾಗಿ ಗಮನ ಸೆಳೆದರು. ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂಬ ಪ್ರಾರ್ಥನೆಯಿಂದ ಆರಂಭಗೊಂಡ ಪಥಸಂಚಲನವು ಚಾಮರಾಜನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ದೇಗುಲದ ಆವರಣದಲ್ಲಿ ಮುಕ್ತಾಯಗೊಂಡಿತು. ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಿಂದ ಈ ಪಥಸಂಚಲನಕ್ಕೆ ಕಾರ್ಯಕರ್ತರು ಆಗಮಿಸಿ ಭಾಗಿಯಾಗಿದ್ದರು. 

ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯ: ಸರ್ಕಾರ ಆದೇಶ

ಇದನ್ನೂ ಓದಿ: ನಾವು ಆರ್​​ಎಸ್​​ಎಸ್ ಟಾರ್ಗೆಟ್ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Share This Video


Download

  
Report form
RELATED VIDEOS