ಚಿಕ್ಕಮಗಳೂರು: ಧಾರಾಕಾರ ಮಳೆ, ಉಕ್ಕಿ ಹರಿದ ತುಂಗೆ; ರಸ್ತೆಗಳು ಜಲಾವೃತ

ETVBHARAT 2025-08-17

Views 79

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೂ ಮಲೆನಾಡಲ್ಲಿ ಭಾರಿ ಗಾಳಿ, ಮಳೆಯ ಅಬ್ಬರ ಜೋರಾಗಿದೆ. ತುಂಗಾ ನದಿ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯಲು ಪ್ರಾರಂಭಿಸಿದೆ. 

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಜೋರು ಮಳೆ ಸುರಿಯುತ್ತಿದ್ದು, ತುಂಗಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಶೃಂಗೇರಿಯಲ್ಲಿ ನದಿ ನೀರು ರಸ್ತೆಯ ಮಟ್ಟಕ್ಕೆ ಹರಿಯಲು ಪ್ರಾರಂಭಿಸಿದೆ.

ಮಳೆ ಹೀಗೇ ಮುಂದುವರಿದರೆ ಗಾಂಧಿ ಮೈದಾನ, ಪ್ಯಾರಲಲ್ ರಸ್ತೆ ಜಲಾವೃತವಾಗುವ ಸಾಧ್ಯತೆ ಹೆಚ್ಚಾಗಿದೆ. ನದಿಪಾತ್ರದ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗುವ ಆತಂಕ ಜನರಲ್ಲಿ ಮನೆಮಾಡಿದೆ.

ಮೂಡಿಗೆರೆ ತಾಲೂಕಿನ ಕುದುರೆಮುಖ ಭಾಗದಲ್ಲಿ ಮಘೆ ಮಳೆ ಅಬ್ಬರಿಸುತ್ತಿದೆ. ಕಿಗ್ಗಾ - ಮಳೂರು - ಕೋಗಿನಬೈಲು - ಮೇಲ್ಗಟ್ಟದ ಗ್ರಾಮದ ರಸ್ತೆಗಳು ಜಲಾವೃತವಾಗಿವೆ.

ಕೊಟ್ಟಿಗೆಹಾರ - ಚಾರ್ಮಾಡಿಯಲ್ಲಿ ಮಳೆ ಅಬ್ಬರಕ್ಕೆ ವಾಹನ ಸವಾರರು ಪರದಾಡಿದರು. ಮೂಡಿಗೆರೆಯ ಬಿದರಹಳ್ಳಿ ಬಳಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. 

ಇದನ್ನೂ ಓದಿ: ಶೃಂಗೇರಿ ಪಟ್ಟಣಕ್ಕೆ ಬಂದ ಕಾಡಾನೆಗಳು: ತುಂಗಾ ನದಿಯಲ್ಲಿ ಸ್ನಾನ- ವಿಡಿಯೋ - WILD ELEPHANTS

Share This Video


Download

  
Report form
RELATED VIDEOS