ಎರಡು ಬಸ್​​​​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ಆಟೋ, ಐವರಿಗೆ ಗಾಯ: ವಿಡಿಯೋ

ETVBHARAT 2025-08-05

Views 32

ಚಿತ್ರದುರ್ಗ: ನಗರದ ಬಸ್ ನಿಲ್ದಾಣದ ಬಳಿ ಎರಡು ಬಸ್​​ಗಳ ನಡುವೆ ಆಟೋ ಸಿಲುಕಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಬಸ್​ಗಳ ನಡುವೆ ಆಟೋ ಸಿಲುಕಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌

ಹಿಂಭಾಗದಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಆಟೋ ಮುಂದೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ಅಪ್ಪಳಿಸಿದೆ. ಇದರಿಂದ ಎರಡು ಬಸ್‍ಗಳ ನಡುವೆ ಆಟೋ ಸಿಲುಕಿದೆ. ಇದರಿಂದ ಆಟೋದಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಖಾಸಗಿ ಬಸ್ ಆಟೋಗೆ ಡಿಕ್ಕಿ ಹೊಡೆದಿದ್ದರಿಂದ ಕೆಎಸ್​ಆರ್​ಟಿಸಿ ಬಸ್‍ಗೆ ಅಪ್ಪಳಿಸಿದೆ. ಎರಡು ಬಸ್​ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದೆ. ಇದರಲ್ಲಿ ಖಾಸಗಿ ಬಸ್ ಚಾಲಕನ ತಪ್ಪು ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೆಟ್ಟು ನಿಂತ ಲಾರಿಗೆ ಖಾಸಗಿ ಬಸ್ ಡಿಕ್ಕಿ, ಇಬ್ಬರು ಸಾವು: ರಸ್ತೆಯಲ್ಲಿ‌ ಕೆಟ್ಟು ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿ, 15 ಮಂದಿ‌ ಗಂಭೀರವಾಗಿ ಗಾಯಗೊಂಡ ಘಟನೆ ಕಳೆದ ಬುಧವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಶಿವಮೊಗ್ಗ ತಾಲೂಕಿನ ಗಾಜನೂರು ಡ್ಯಾಂ ಬಳಿ ನಡೆದಿತ್ತು.

ಇದನ್ನೂ ಓದಿ: ಡಿವೈಡರ್​ಗೆ ಡಿಕ್ಕಿ ಹೊಡೆದು ಮನೆಯ ಕಾಂಪೌಂಡ್ ಗೋಡೆ ಏರಿ ನಿಂತ ಕಾರು!: ವಿಡಿಯೋ

ಇದನ್ನೂ ಓದಿ: ಮಡಿಕೇರಿ ಬಳಿ ಲಾರಿ ಡಿಕ್ಕಿ: ಕಾರಿನಲ್ಲಿದ್ದ ನಾಲ್ವರು ದುರ್ಮರಣ

Share This Video


Download

  
Report form
RELATED VIDEOS