ಮಂಗಳೂರಲ್ಲಿ ಕೊಳವೆಬಾವಿಗೆ ಬಿದ್ದ ನಾಯಿಮರಿ ರಕ್ಷಿಸಿದ ಅಗ್ನಿಶಾಮಕ ದಳ

ETVBHARAT 2025-01-14

Views 0

ಮಂಗಳೂರು: ಬೋರ್​ವೆಲ್ ಕೊಳವೆಬಾವಿಗೆ ಬಿದ್ದಿದ್ದ ನಾಯಿ ಮರಿಯನ್ನು ಪಾಂಡೇಶ್ವರ ಅಗ್ನಿಶಾಮಕ ದಳ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ, ಜೀವಂತಾಗಿ ಮೇಲಕ್ಕೆತ್ತಿದ ಘಟನೆ ಮಂಗಳೂರಿನ ಕೋಟೆಕಾರ್‌ನಲ್ಲಿ ನಡೆದಿದೆ.

ಇಲ್ಲಿನ ಕೋಟೆಕಾರ್‌ನಲ್ಲಿ ನಾಯಿ ಮರಿಯೊಂದು ಬೋರ್‌ವೆಲ್‌ಗೆ ಬಿದ್ದಿದೆ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಕರೆ ಬಂದಿತ್ತು. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದೆ. ನಾಯಿ ಮರಿಯು ಸುಮಾರು 25ಅಡಿ ಆಳದ ಅರ್ಧ ಅಡಿ ವ್ಯಾಸದ ಬೋರ್‌ವೆಲ್‌ಗೆ ಬಿದ್ದಿತ್ತು. ಅಲ್ಲದೆ ನಾಯಿಮರಿಯ ಮೇಲೆ ಒಂದು ಚಿಕ್ಕ ಮರದ ತುಂಡು ಕೂಡ ಬಿದ್ದಿತ್ತು.

ಆದ್ದರಿಂದ ಅಗ್ನಿಶಾಮಕದಳ ಸಿಬ್ಬಂದಿಯು ಮೊದಲು ಮೀನು ಹಿಡಿಯುವ ಕೊಕ್ಕೆಯನ್ನು ಬಳಸಿ ಮರದ ತುಂಡನ್ನು ನಿಧಾನವಾಗಿ ಮೇಲೆ ತೆಗೆದರು. ಬಳಿಕ ಅದೇ ಕೊಕ್ಕೆ ಬಳಸಿ ನಾಯಿ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದೆ. ಅಗ್ನಿಶಾಮಕದಳದ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಫ್ರಿಡ್ಜ್ ಸ್ಫೋಟ​ : ಮನೆಯಲ್ಲಿದ್ದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲು

ಇದನ್ನೂ ಓದಿ: ಬಂಡೀಪುರದಲ್ಲಿ ಆನೆ ಮೇಲೆ ದಾಳಿಗೆ ವಿಫಲ ಯತ್ನ; ಕೆ.ಗುಡಿಯಲ್ಲಿ ಬಿಸಿಲಿಗೆ ಮೈಯೊಡ್ಡಿದ ಹುಲಿ- ವಿಡಿಯೋ ನೋಡಿ 

Share This Video


Download

  
Report form
RELATED VIDEOS