ಬೆಳಗಾವಿಯಲ್ಲಿ ಮಕ್ಕಳನ್ನು ಕದ್ದು ದೇಹದ ಭಾಗಗಳನ್ನು ತೆಗೆದು ಮಾರಾಟ ಮಾಡ್ತಾರೆ ಎಂಬ ವದಂತಿ ಹಬ್ಬಿತ್ತು. ನಂದಗಡದಲ್ಲಿ ರಗ್ಗು ಮಾರುವವರನ್ನ ಹಿಡಿದು ಮಕ್ಕಳ ಕಳ್ಳರಂತ ತಿಳಿಯಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಅಸ್ವಸ್ಥನನ್ನ ಮಕ್ಕಳ ಕಳ್ಳ ಅಂತ ಹೇಳಲಾಗುತ್ತಿತ್ತು. ಕೌಜಲಗಿ ಗ್ರಾಮದಲ್ಲಿ ಸಿಕ್ಕವರು ಸಾಧುಗಳಾಗಿದ್ದು ಉತ್ತರ ಪ್ರದೇಶ ಮೂಲದವರಾಗಿದ್ರು. ಹೀಗೆ ವದಂತಿ ಹೆಚ್ಚಾದಂತೆ ಪೊಲೀಸರು ಎಚ್ಚೆತ್ತು ಜಾಗೃತಿ ಮೂಡಿಸಿದ್ರು. ಅಪರಿಚಿತರು ಕಂಡರೆ ಪೊಲೀಸರಿಗೆ ತಿಳಿಸುವಂತೆ ಹೇಳಿದ್ರು.
#publictv #belagavi