'ಜಪಾವತಿ'ಯ ಅಬ್ಬರಕ್ಕೆ ಕಾಫಿ ತೋಟ ನಾಶ | Chikkamagaluru | Public TV

Public TV 2022-09-14

Views 15

ಹೇಮಾವತಿಯ ಉಪನದಿ ಜಪಾವತಿಯ ಅಬ್ಬರಕ್ಕೆ 1 ಎಕರೆಯಷ್ಟು ಕಾಫಿ ಹಾಗೂ ಅಡಿಕೆ ತೋಟ ಕೊಚ್ಚಿ ಹೋಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಸುಪ್ರಿಮ್ ಎಂಬುವರ ಅಡಿಕೆ ಹಾಗೂ ಕಾಫಿತೋಟ 2013ರಿಂದಲೂ ಪ್ರತಿವರ್ಷ ಮಳೆಗಾಲಕ್ಕೆ ಕೊಚ್ಚಿ ಹೋಗುತ್ತಿದೆ. ಪ್ರತಿ ವರ್ಷ 1-2 ಗುಂಟೆ ಕೊಚ್ಚಿ ಹೋಗ್ತಿತ್ತು. ಆದರೆ, ಈ ವರ್ಷ ಒಂದೇ ರಾತ್ರಿಗೆ ಸುಮಾರು ಒಂದು ಎಕರೆಯಷ್ಟು ಕಾಫಿ-ಅಡಿಕೆ ತೋಟ ಕೊಚ್ಚಿ ಹೋಗಿದೆ. 2013ರಿಂದ ಇವರೆಗೆ 3-4 ಎಕರೆಯಷ್ಟು ತೋಟವನ್ನ ಕಳೆದುಕೊಂಡಿದ್ದಾರೆ. ಈವರೆಗೆ ಪರಿಹಾರವೇ ಸಿಕ್ಕಿಲ್ಲ.

#publictv #chikkamagaluru #raindamage

Share This Video


Download

  
Report form
RELATED VIDEOS