ದುಬೈ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ ಭರ್ಜರಿ 5 ವಿಕೆಟ್‍ಗಳ ಗೆಲುವು ಸಾಧಿಸಿದೆ. ಬಾಬರ್ ಪಡೆ ನೀಡಿದ 148 ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತವಾಯ್ತು. ಬಳಿಕ ರೋಹಿತ್ ಶರ್ಮಾ - ಕೊಹ್ಲಿ ಜೊತೆಯಾಟ ತಂಡಕ್ಕೆ ಕೊಂಚ ಶಕ್ತಿ ತುಂಬಿಸ್ತು. ಬಳಿಕ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಪಾಕ್ ಬೌಲರ್‍ಗಳ ಬೆವರಿಳಿಸಿದ್ರು.. ಕೊನೆಗೆ ಹಾರ್ದಿಕ್ ಪಾಂಡ್ಯಾ ತಂಡ ಗೆಲುವಿನ ದಡ ಸೇರಲು ಕಾರಣರಾದ್ರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ರೆ, ಪಾಕ್ ವಿರುದ್ಧದ ಕಳೆದ ವರ್ಷದ ಟಿ-20 ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
#publictv #newscafe