ಕನ್ನಡದ ಜೊತೆಜೊತೆಯಲಿ ಸೀರಿಯಲ್ ವಿವಾದ ತಾರಕಕ್ಕೇರಿದೆ. ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಅನಿರುದ್ಧ್ ಕಿಡಿಕಾರಿದ್ದಾರೆ. ನಾನು ಕೆಲಸ ಮಾಡ್ತಿರೋ ಯಾವುದೇ ಕ್ಷೇತ್ರವಾಗಿರಬಹುದು ನಾನು ಅಹಂಕಾರ ತೋರಿಸಿರೋದು ನೋಡಿದ್ದೀರಾ? ಸೆಟ್‍ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ. ಇದು ನಾಲ್ಕು ಗೋಡೆ ಮಧ್ಯ ಜಗಳವಾಡಿರೋದು, ಬೀದಿಗೆ ತರಬಾರದು.
ಮನುಷ್ಯನಿಗೆ ಕೋಪ ಸಹಜ. ಅವರು ನನ್ನ ಹತ್ತಿರ ಬಂದು ಚರ್ಚೆ ಮಾಡಬಹುದಿತ್ತು. ನನ್ನ ಕೇಳದೆ ಎರಡು ವರ್ಷ ಯಾವ ಚಾನೆಲ್‍ನಲ್ಲೂ ಆಕ್ಟ್ ಮಾಡಬಾರದು ಅಂತ ನಿರ್ಬಂಧ ಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ. ನಾನು ಸಾಮಾಜಿಕ ಕೆಲಸ ಮಾಡ್ತೀನಿ. ನನ್ನ ಅಭಿನಯಕ್ಕೆ ತುಂಬಾ ಜನ ಒಳ್ಳೆಯ ಮಾತು ಹೇಳಿದ್ದಾರೆ. ಇದಕ್ಕಿಂತ ಯಶಸ್ಸು ಬೇಕಾ..? ಅಂತ ಆಕ್ರೋಶ ಹೊರಹಾಕಿದ್ದಾರೆ.
#publictv #jotejoteyaliserial #aniruddhajatkar