ರಾಜಧಾನಿ ಬೆಂಗಳೂರು ಮುಕುಟಕ್ಕೆ ಮತ್ತೊಂದು ಗರಿ ಸೇರಲಿದೆ. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ಜಂಬೋ ಜೆಟ್ ವಿಮಾನ ಸೇವೆಗಳು ಶುರುವಾಗಲಿವೆ. ಅಕ್ಟೋಬರ್ 30ರಿಂದ ದುಬೈನಿಂದ ನೇರವಾಗಿ ಬೆಂಗಳೂರಿಗೆ ಜಂಬೋಜೆಟ್ ವಿಮಾನಗಳು ಆರಂಭವಾಗಲಿವೆ ಎಂದು ಎಮಿರೇಟ್ಸ್ ಪ್ರಕಟಿಸಿದೆ. 2014ರಿಂದಲೇ ಮುಂಬೈ ಏರ್‍ಪೋರ್ಟ್‍ನಲ್ಲಿ ಏರ್‍ಬಸ್ 380 ಜಂಬೋಜೆಟ್ ಸೇವೆಗಳು ಲಭ್ಯ ಇವೆ. ಇದೀಗ ಈ ಸಾಲಿಗೆ ಬೆಂಗಳೂರು ಕೂಡ ಸೇರಲಿದೆ. ಜಂಬೋಜೆಟ್ ವಿಮಾನಗಳಲ್ಲಿ ಮೂರು ಕ್ಲಾಸ್‍ಗಳು ಇರಲಿದ್ದು, ಏಕಕಾಲದಲ್ಲಿ 853 ಮಂದಿ ಪ್ರಯಾಣ ಮಾಡುವ ಅವಕಾಶ ಇರುತ್ತದೆ
#publictv #hrranganath #bigbulletin