Big Bulletin | BJP High Command Inducts BS Yediyurappa Into Parliamentary Board | HR Ranganath | Aug 17, 2022

Public TV 2022-08-17

Views 12

ಮಾಜಿ ಸಿಎಂ ಯಡಿಯೂರಪ್ಪರನ್ನು ಪಕ್ಷ ಕಡೆಗಣಿಸಿದೆ.. ಮೂಲೆಗೆ ತಳ್ಳಿದೆ.. ಈಗ ಪಕ್ಷಕ್ಕೆ ಯಾರು ಮಾಸ್ ಲೀಡರ್ ಇಲ್ಲ ಎಂಬ ಆರೋಪ ಬಿಜೆಪಿ ಹೈಕಮಾಂಡ್ ವಿರುದ್ಧ ಕೇಳಿಬರುತ್ತಲೇ ಇತ್ತು. ಆದ್ರೆ, ಇದು ಸುಳ್ಳೆಂದು ಬಿಜೆಪಿ ಸಾಬೀತು ಮಾಡಿದೆ. ಬಿಎಸ್‍ವೈಗೆ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಪ್ರಮೋಷನ್ ನೀಡಲಾಗಿದೆ. ಪಕ್ಷದ ಅತ್ಯುನ್ನತ ಮಂಡಳಿಯಾದ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಟಾಪ್ ಐದನೇ ಸ್ಥಾನ ನೀಡಿ, ಅವರನ್ನು ಪಕ್ಷ ಕಡೆಗಣಿಸಿಯೂ ಇಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಮುಂದಿನ 2 ವರ್ಷ ಸಾಲು ಸಾಲು ಚುನಾವಣೆಗಳು ಎದುರಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಭಾರೀ ಬದಲಾವಣೆಗಳು ಆಗುತ್ತಿವೆ. ಇದರ ಭಾಗವಾಗಿ ಪಕ್ಷದ ಸಂಸದೀಯ ಮಂಡಳಿಯನ್ನು ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯನ್ನು ಪುನರ್‍ರಚಿಸಲಾಗಿದೆ. ಎರಡರಲ್ಲಿಯೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಕ್ ನೀಡಿ ಅವರ ಸ್ಥಾನದಲ್ಲಿ ಯಡಿಯೂರಪ್ಪರನ್ನು ತರಲಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೇ, 77 ವರ್ಷದ ಯಡಿಯೂರಪ್ಪ ಸಲುವಾಗಿ ಇಲ್ಲಿ ಇದೇ ಮೊದಲ ಬಾರಿಗೆ 75 ವರ್ಷದ ವಯೋಮಿತಿ ನಿಯಮವನ್ನು ಪಕ್ಕಕ್ಕೆ ಇಡಲಾಗಿದೆ. ಇದನ್ನು ನೋಡಿದ್ರೆ, ಬಿಜೆಪಿ ಹೈಕಮಾಂಡ್ ಕರ್ನಾಟಕ ಚುನಾವಣೆಯನ್ನು ಮತ್ತು ಯಡಿಯೂರಪ್ಪ ನಿರ್ವಹಿಸಲಿರುವ ಪಾತ್ರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಜೊತೆಗೆ ದಿವಂಗತ ಅನಂತ್ ಕುಮಾರ್ ಬಳಿಕ ಯಡಿಯೂರಪ್ಪ ಪವರ್ ಫುಲ್ ಮಂಡಳಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು, ಎಂದಿನಂತೆ ಕರ್ನಾಟಕ ಮೂಲದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಎರಡು ಬೋರ್ಡ್‍ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿರುವ ಬಿಎಸ್‍ವೈ ಬೆಂಬಲಿಗರಲ್ಲಿ ಹೊಸ ಹುರುಪು ತಂದಿದೆ. ಬಿಎಸ್‍ವೈ ಆಯ್ಕೆಯನ್ನು ಸಿಎಂ ಬೊಮ್ಮಾಯಿ, ಕಟೀಲ್ ಸೇರಿ ಬಿಜೆಪಿಯ ಎಲ್ಲರೂ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿಗೆ ಕರೆ ಮಾಡಿದ ಬಿಎಸ್‍ವೈ ತಮ್ಮ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ನಡೆಯನ್ನು ಸಿದ್ದರಾಮೋತ್ಸವ ಯಶಸ್ಸಿನ ಖುಷಿಯಲ್ಲಿದ್ದ ಕಾಂಗ್ರೆಸ್‍ಗೆ ನೀಡಿದ ಮಾಸ್ಟರ್ ಸ್ಟ್ರೋಕ್ ಎಂದೇ ವಿಶ್ಲೇಷಿಸಿಲಾಗುತ್ತಿದೆ.ಅಂದ ಹಾಗೇ, ಬಿಎಸ್‍ವೈಗೆ ಸ್ಥಾನಮಾನ ನೀಡಿದ್ದನ್ನು ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

#publictv #hrranganath #bigbulletin

Share This Video


Download

  
Report form
RELATED VIDEOS