ರಾಯರ ಆರಾಧನಾ ಮಹೋತ್ಸವ ನಡೆಯುತ್ತಿರುವ ಮಂತ್ರಾಲಯಕ್ಕೆ ಮಾಜಿ ಸಿಎಂ ಬಿಎಸ್‍ವೈ ಭೇಟಿ ನೀಡಿ ಆಶೀರ್ವಾದ ಪಡೆದ್ರು. ಈ ವೇಳೆ ಮಾತಾಡಿದ ಬಿಎಸ್‍ವೈ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನಿಶ್ಚಿತ ಕಾಂಗ್ರೆಸ್‍ನವರ ಸಿಎಂ ಕನಸು ನನಸಾಗದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ. ಆಗಸ್ಟ್ 21ರಿಂದ ರಾಜ್ಯದ ಎಲ್ಲೆಡೆ ಪ್ರವಾಸ ಮಾಡುವೆ. ಮೂರು ತಂಡಗಳಾಗಿ ರಾಜ್ಯ ಪ್ರವಾಸ ಮಾಡುವುದಕ್ಕೆ, ಶೀಘ್ರದಲ್ಲೇ ಪ್ರವಾಸದ ರೂಪರೇಷೆ ಸಿದ್ಧಪಡಿಸಲಾಗುವುದು ಎಂದರು. ಚುನಾವಣೆ ಹತ್ತಿರದಲ್ಲೇ ಇರೋದರಿಂದ ಸಿಎಂ ಬದಲಾವಣೆ ವಿಚಾರ ಇಲ್ಲ.. ಬೊಮ್ಮಾಯಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಊಹಾಪೋಹ ಬೇಡ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೆವೆ ಎಂದ್ರು. ಅಲ್ಲದೇ ನಾನು ರಾಜೀನಾಮೆ ಕೊಟ್ಟ ನಂತರವೇ ಸಿಎಂ ಆಯ್ಕೆ ಆಗಿದೆ. ನನಗೆ ಪಕ್ಷ ಎಲ್ಲಾ ರೀತಿಯ ಗೌರವ ನೀಡಿದೆ ಪಕ್ಷದಿಂದ ನನಗೆ ಅನ್ಯಾಯ ಆಗಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ.. ಕೇಂದ್ರ ಒಪ್ಪಿದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆಗೆ ಅವಕಾಶ ಸಿಗಲಿದೆ. ಸಂಪುಟ ವಿಸ್ತರಣೆಯ ಮೂಲಕ ಸಿಎಂ ರಾಜ್ಯದ ಎಲ್ಲ ಪ್ರದೇಶಕ್ಕೆ ಪ್ರಾಶಸ್ತ್ಯ ನೀಡಲಿದ್ದಾರೆ ಎಂದ್ರು.
#publictv #bsyediyurappa