ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ವದಂತಿ ಹರಡಿದೆ. ಇದಕ್ಕೆ ತುಪ್ಪ ಸುರಿದಂತೆ ಮೂರನೇ ಮುಖ್ಯಮಂತ್ರಿ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿ ಟಾಂಟ್ ಕೊಟ್ಟಿದೆ. ಆದ್ರೆ ಬಿಜೆಪಿ ಹೈಕಮಾಂಡ್ ನಿಂದ ಯಾವ ಸ್ಪಷ್ಟವಾದ ಸಂದೇಶವೂ ಯಾವ ನಾಯಕರಿಗೂ ರವಾನೆ ಆಗಿಲ್ಲ. ಸಂಘಟನೆ ಬದಲಾವಣೆ ಹೈಕಮಾಂಡ್ ಬಗ್ಗೆಯೂ ಮಾತಾಡಿಲ್ಲ, ಸರ್ಕಾರದಲ್ಲಿನ ಬದಲಾವಣೆ ಬಗ್ಗೆಯೂ ಹೈಕಮಾಂಡ್ ಮಾತಾಡಿಲ್ಲ. ಹೈಕಮಾಂಡ್ ನಿಲುವು ಸದ್ಯಕ್ಕೆ ಅಸ್ಪಷ್ಟ, ಸ್ವಾತಂತ್ರ್ಯೋತ್ಸವದ ಬಳಿಕ ಸ್ಪಷ್ಟ ಸಂದೇಶ ಹೊರಬೀಳುತ್ತಾ.? ಎಂಬ ಕುತೂಹಲ ಇದೆ. ಚುನಾವಣೆ ದೃಷ್ಟಿಯಿಂದ ವಿವಿಧ ಸರ್ವೇ ವರದಿಗಳನ್ನ ಆಧರಿಸಿ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಅಚ್ಚರಿಯೋ..!? ಅಥವಾ ಅನಿರೀಕ್ಷಿತ ತಂತ್ರಗಾರಿಕೆಯೋ..!? ಅಥವಾ ಎರಡೂ ಅಲ್ಲದೆ ಯಥಾಸ್ಥಿತಿಯ ಮಾರ್ಗವೋ..!? ಎಂಬ ಚರ್ಚೆ ಬಿಜೆಪಿ ಪಡಸಾಲೆಯಲ್ಲೇ ನಡೀತಾ ಇದೆ. ಉತ್ತರಾಖಂಡ ಮಾದರಿಯಲ್ಲಿ ರಾಜ್ಯದಲ್ಲೂ ಮೂರನೇ ಮುಖ್ಯಮಂತ್ರಿಯ ಆಯ್ಕೆಯೂ ಆಗಬಹುದು ಎಂಬ ಗುಸು ಗುಸು-ಪಿಸು ಪಿಸು ಮಾತುಗಳಿಗೆ ಆಗಸ್ಟ್ 16ರ ನಂತರ ವಿರಾಮ ಬಿದ್ದರೂ ಅಚ್ಚರಿ ಇಲ್ಲ. ಈ ನಡುವೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವಧಿ ಅಗಸ್ಟ್ 28ರಂದು ಅಂತ್ಯವಾಗುತ್ತಿರುವ ಹಿನ್ನಲೆ ಸಂಘಟನೆ ಮತ್ತು ಸರ್ಕಾರದಲ್ಲಿ ಏಕ ಕಾಲದಲ್ಲಿ ಬದಲಾವಣೆ ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಒಂದಷ್ಟು ಚರ್ಚೆ ನಡೆಯುತ್ತಿದೆ. ಸದ್ಯ 75 ವರ್ಷದ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆಯ ತಯಾರಿಯಲ್ಲಿ ಬ್ಯುಸಿಯಾಗಿರುವ ಹೈಕಮಾಂಡ್ ನಾಯಕರು ಮುಗಿದ ಬಳಿಕ ರಾಜಕೀಯವಾಗಿ ಚಟುವಟಿಕೆಗಳನ್ನು ಶುರು ಮಾಡಲಿದೆ ಎಂಬುದು ದೆಹಲಿ ಮೂಲಗಳ ಮಾಹಿತಿ.
#publictv #newscafe #hrranganath