ಬೀದರ್‍ನಲ್ಲಿ ಭಾರಿ ಮಳೆಯಿಂದ ಪದವಿ ಕಾಲೇಜಿನ ಮೇಲ್ಛಾವಣಿ ಕುಸಿಯುವ ಹಂತಕ್ಕೆ ಬಂದಿರೋದು ವಿದ್ಯಾರ್ಥಿನಿಯರ ಆತಂಕಕ್ಕೆ ಕಾರಣವಾಗಿದೆ. ನಗರದ ಜನವಾಡ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯ ಪಾಡು ಯಾರಿಗೂ ಬೇಡವಾಗಿದೆ. ಸುಮಾರು 40 ವರ್ಷಗಳ ಹಳೆಯ ಪದವಿ ಕಾಲೇಜು ಇದ್ದಾಗಿದ್ದು, ಕುಗ್ರಾಮಗಳಿಂದ ಬರುವ 500ಕ್ಕೂ ಅಧಿಕ ವಿದ್ಯಾರ್ಥಿನಿಯರು ಕಾಲೇಜಿಗೆ ಬರ್ತಾರೆ. ಇದೀಗ ಮೇಲ್ಛಾವಣಿ ಅದ್ಯಾವಾಗ ಬೀಳುತ್ತೋ ಎಂಬ ಭಯದಿಂದ ಓದುವ ಕಡೆ ಗಮನ ಹರಿಸೋಕೆ ಆಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸ್ತಿದ್ದಾರೆ. ಸಮಸ್ಯೆ ಕೇಳಲು ಬಾರದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
#publictv #bidar #governmentcollege