ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾಗಿದ್ದ ಮಸೂದ್, ಪ್ರವೀಣ್, ಫಾಝೀಲ್ ನಿವಾಸಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ, ಸಾಂತ್ವನ ಹೇಳಿದ್ರು. ಮೂರೂ ಕುಟುಂಬಗಳಿಗೂ ತಲಾ 5 ಲಕ್ಷ ಪರಿಹಾರ ವಿತರಿಸಿದ್ರು. ಅಗತ್ಯಬಿದ್ದರೆ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ಕೊಟ್ರು. ಬಳಿಕ ಮಾತನಾಡಿದ ಹೆಚ್‍ಡಿಕೆ ತಪ್ಪಿತಸ್ಥರು ಯಾರೇ ಆಗಿರಲಿ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ರು. ಪ್ರವೀಣ್ ಕೊಲೆ ಕೇಸನ್ನು ಎನ್‍ಐಗೆ ವಹಿಸಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರು. ಇನ್ನು ಮಸೂದ್ ನಿವಾಸಕ್ಕೆ ಸಿಎಂ ಭೇಟಿ ನೀಡದ ಸಿಎಂ ವಿರುದ್ಧ ಕಿಡಿಕಾರಿದ್ರು. ಈ ಮಧ್ಯೆ ಕೇವಲ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ, ಪರಿಹಾರ ಕೊಟ್ಟಿರುವ ಸಿಎಂ ವಿರುದ್ಧ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದ್ದಂತೆ ಸಿಎಂ ಬೊಮ್ಮಾಯಿ ಎಚ್ಚೆತ್ತಿದ್ದಾರೆ. ಮೃತ ಫಾಜಿಲ್, ಮಸೂದ್ ಮನೆಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ಕೊಡೋದಾಗಿ ತೇಪೆ ಹಚ್ಚಿದ್ದಾರೆ.
#publictv #praveennettaru #masood #hdkumaraswamy #fazil