ಬಳ್ಳಾರಿಯ ಕಂಪ್ಲಿಯಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಟದ ದೊಡ್ಡ ಜಾಲವೇ ಪತ್ತೆ ಆಗಿದೆ. ತಡರಾತ್ರಿ ಶಾಸಕ ಜೆ.ಎನ್ ಗಣೇಶ್ ನೇತೃತ್ವದಲ್ಲಿ ಮೇಲ್ನೋಟಕ್ಕೆ ಕೋಳಿ ಫಾರಂ ರೀತಿ ಇದ್ದ ಗೋದಾಮು ಮೇಲೆ ದಾಳಿ ನಡೆಸಲಾಯ್ತು.. ಒಳಗೆ ನೋಡಿದ್ರೇ 1500 ಅನ್ನಭಾಗ್ಯ ಅಕ್ಕಿ ಚೀಲಗಳನ್ನು ಸಾಲಾಗಿ ಜೋಡಿಸಲಾಗಿತ್ತು. ಕಂಪ್ಲಿಯಿಂದ ತಮಿಳುನಾಡು, ಗುಜರಾತ್‍ಗೆ ದಿನಕ್ಕೆರಡು ಲಾರಿಯಲ್ಲಿ ತಲಾ 400 ಚೀಲದಂತೆ ಅಕ್ರಮ ಸಾಗಾಣಿಕೆ ಮಾಡ್ತಿರೋದು ಗಮನಕ್ಕೆ ಬಂತು. ದಾಳಿ ವೇಳೆ ಅಲ್ಲಿದ್ದ ಅನ್ಯಭಾಷಿಕರು ಓಡಿ ಹೋಗಿದ್ದು.. ನಾಲ್ವರು ಮಾತ್ರ ಸಿಕ್ಕಾಕಿಕೊಂಡ್ರು. ಇನ್ನು ಈ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟ ಹಿಂದೆ ಪ್ರಭಾವಿ ಕೈವಾಡ ಶಂಕೆ ವ್ಯಕ್ತಪಡಿಸಲಾಗ್ತಿದೆ.
#publictv #newscafe