ಕೇವಲ ಒಂದು ದಿನದ ಮಟ್ಟಿಗೆ ಬಿಡುವು ಕೊಟ್ಟಿದ್ದ ಮಳೆ ಮಲೆನಾಡಿನ ಹಲವೆಡೆ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಚಿಕ್ಕಮಗಳೂರಿನ ಕಡೂರು ಭಾಗದಲ್ಲಿ ಅಡಿಕೆ ಹಾಗೂ ತೆಂಗಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ತೋಟದ ನಡ್ವೆಯೇ ಮೂರ್ನಾಲ್ಕು ಅಡಿ ಎತ್ತರದವರೆಗೂ ನದಿ ನೀರು ಪ್ರವಹಿಸ್ತಿದೆ. ರೈತರು ಕಂಗಾಲಾಗಿದ್ದಾರೆ. ಕೊಪ್ಪ ತಾಲೂಕಿನ ಕಲ್ಲು ಗುಡ್ಡೆ ಗ್ರಾಮದ ರಸ್ತೆ, ಜಯಪುರದಿಂದ ಬಸರಿಕಟ್ಟೆ ಮಾರ್ಗದ ರೋಡ್ ಅರ್ಧಕರ್ಧ ಕಟ್ಟಾಗಿದೆ. ಈ ಭಾಗದ ಹತ್ತಾರು ಹಳ್ಳಿಗಳ ಜನ ಸಂಕಷ್ಟಕ್ಕೀಡಾಗಿದ್ದಾರೆ.ಮಳೆ ನಡುವೆಯೇ ಚಿಕ್ಕಮಗಳೂರಿನ ಉಂಡೆ ದಾಸರಹಳ್ಳಿಯ ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿಗಾಗಿ ಶೋಧ ಮುಂದುವರೆದಿದೆ. 10ದಿನದ ಹಿಂದೆ ಕೊಚ್ಚಿಹೋದ ಬಾಲಕಿ ಸುಪ್ರಿತಾ ಸುಳಿವು ಇನ್ನೂ ಸಿಕ್ಕಿಲ್ಲ. ಶೃಂಗೇರಿಯಲ್ಲಿ ಇವತ್ತು ಕೂಡ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಿವಮೊಗ್ಗ ಜಿಲ್ಲೆ ತಾಳಗುಪ್ಪದ ಬೀಸನಗದ್ದೆಯಲ್ಲಿ ಇತ್ತೀಚಿಗೆ 1 ಕೋಟಿ ವೆಚ್ಚದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ ರಸ್ತೆ ಕೊಚ್ಚಿ ಹೋಗಿದೆ. ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೊಸನಗರದ ಸುಣ್ಣದ ಬಸ್ತಿ ಬಳಿ ಮರ ಬಿದ್ದು, ರಿಪ್ಪನ್ ಪೇಟೆ - ಕೋಣಂದೂರು ಮಾರ್ಗ ಬಂದ್ ಆಗಿದೆ. ಕೊಡಗಿನ ಶಿರಂಗಾದಲ್ಲಿ ಮತ್ತೊಂದು ಮನೆ ಕುಸಿದಿದೆ. ಮಲಗೋಕು ಜಾಗ ಇಲ್ಲವಾಯ್ತು ಎಂದು ವೃದ್ಧೆ ಕಣ್ಣೀರು ಇಟ್ಟಿದ್ದಾರೆ. ಕರಾವಳಿಯಲ್ಲಿ ಇವತ್ತು ಎಲ್ಲಿಯೂ ಜೋರು ಮಳೆ ಆಗಿಲ್ಲ. ಆದ್ರೆ, ಗುಡ್ಡಕುಸಿತ ಮತ್ತು ನೆರೆ ಅವಾಂತರಗಳು ಮುಂದುವರೆದಿವೆ. ದಕ್ಷಿಣ ಕನ್ನಡದ ಹರಿಹರ ಪಲ್ಲತಡ್ಕ ಎಂಬಲ್ಲಿ ಗೃಹಪ್ರವೇಶಕ್ಕೆ ರೆಡಿ ಆಗಿದ್ದ ಮನೆ ಮೇಲೆ ಗುಡ್ಡ ಕುಸಿದಿದೆ. ಮನೆ ಸಂಪೂರ್ಣ ನೆಲಸಮವಾಗಿದ್ದು, ಅದೃಷ್ಟವಶಾತ್ ಸಾವು ನೋವು ತಪ್ಪಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪೂರದ ಬಂಗಾರೇಶ್ವರ ದೇವಸ್ಥಾನ ಜಲಾವೃವಾಗಿದೆ. ಶಿರಸಿಯ ನೂರಾರು ಎಕರೆ ಅಡಿಕೆ ತೋಟ, ಗದ್ದೆಗಳು ನೀರಿನ ಮಡುವಲ್ಲಿವೆ. ಹೊನ್ನಾವರದ ಗೇರುಸೊಪ್ಪ ಡ್ಯಾಂ ಬಹುತೇಕ ಭರ್ತಿ ಆಗಿದ್ದು, 22 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
#publictv #bigbulletin #hrranganath