ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ರಕ್ತ ಕೊಟ್ಟಾದ್ರೂ ಮೈದಾನವನ್ನ ಉಳಿಸಿಕೊಳ್ತಿವಿ ಅಂತ ಸ್ಥಳೀಯರು, ಸ್ಥಳೀಯ ಸಂಘಟನೆಗಳು ಗಟ್ಟಿ ಧ್ವನಿಯನ್ನ ಮೊಳಗಿಸಿದ್ದಾರೆ. ಜುಲೈ 12ಕ್ಕೆ ಚಾಮರಾಜಪೇಟೆ ಬಂದ್‍ಗೂ ಕರೆ ನೀಡಲಾಗಿದ್ದು, ಶಾಸಕ ಜಮೀರ್ ನಾನಿರೋ ತನಕ ಮೈದಾನವನ್ನ ತೆಗೆಯೋಕೆ ಆಗಲ್ಲ ಎಂದಿದ್ದಾರೆ. ಜೊತೆಗೆ ಬಂದ್‍ಗೆ ಕರೆಕೊಟ್ಟವರ ಮನವೊಲಿಕೆಗೆ ಯತ್ನಿಸ್ತಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ಕ್ಕೆ ಗಣರಾಜ್ಯೋತ್ಸವದ ಧ್ವಜಾರೋಹಣ ನಡೆಯಲಿದೆ. ಇಂದು ಆ ತೀರ್ಮಾನ ಮಾಡಿದ್ದೇವೆ. ನಾನು ಶಾಸಕನಾಗಿ ಇರುವವರೆಗೆ ಈದ್ಗಾ ಮೈದಾನ, ಆಟದ ಮೈದಾನವನ್ನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಆಟದ ಮೈದಾನ ಇದ್ದೇ ಇರುತ್ತೆ. ಈದ್ಗಾ ಮೈದಾನವೂ ಇರುತ್ತೆ. ಚಾಮರಾಜಪೇಟೆ ಜನರಲ್ಲಿ ಹುಳಿಯಿಂಡಲು ಯತ್ನಿಸಬೇಡಿ ಅಂದ್ರು. ಜಮೀರ್ ಹೇಳಿಕೆ ಬೆನ್ನಲ್ಲೇ ವಿವಾದ ಮತ್ತಷ್ಟು ಜಟಿಲಗೊಂಡಿದೆ. ಬಂದ್ ಹೇಗಿರಬೇಕು.. ಮನೆ ಮನೆಗೆ ಹೋಗಿ ಕರಪತ್ರಗಳನ್ನ ಹೇಗೆ ಹಂಚಬೇಕು. ಬೃಹತ್ ಸಂಖ್ಯೆಯಲ್ಲಿ ರ್ಯಾಲಿ ಹೇಗೆ ಹೊರಡಬೇಕು ಅಂತ ನಿನ್ನೆ ಸಂಜೆ ಸಭೆ ನಡೆಸಲಾಗಿದೆ. ಇಂದಿನಿಂದ ಕ್ಷೇತ್ರದಾದ್ಯಂತ ಭಿತ್ತಿಪತ್ರಗಳು, ಕರಪತ್ರಗಳನ್ನ ಹಂಚುವ ಪ್ರಕ್ರಿಯೆಯನ್ನು ಬಂದ್‍ಗೆ ಕರೆ ನೀಡಿರುವವರು ಶುರು ಮಾಡಲಿದ್ದಾರೆ.
#publictv #newscafe #hrranganath