ಬಹುಕೋಟಿ ಐಎಂಎ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ಭವ್ಯ ಬಂಗಲೆ ಮೇಲೆ ರೇಡ್ ಆಗಿದ್ದು, ಓರ್ವ ಎಸ್ಪಿ ಸೇರಿದಂತೆ 8 ಜನ ಇನ್ಸ್‍ಪೆಕ್ಟರ್ ನೇತೃತ್ವದ ಎಸಿಬಿ ತಂಡ ಪರಿಶೀಲನೆ ಮಾಡ್ತಿದೆ. ಆದಾಯ ಮೀರಿ ಆಸ್ತಿಗಳಿಕೆ ಮಾಡಿರುವ ಆರೋಪದಲ್ಲಿ ರೇಡ್ ನಡೀತಿದೆ.
ರಾಜ್ಯದ ಇಬ್ಬರು ಭ್ರಷ್ಟ ಅಧಿಕಾರಿಗಳ ಬಂಧನವಾಗಿದೆ. ಪಿಎಸ್‍ಐ ಅಕ್ರಮ ಕೇಸಲ್ಲಿ ಎಡಿಜಿಪಿ ಅಮೃತ್‍ಪೌಲ್‍ರನ್ನು ಸಿಐಡಿ ಮತ್ತು ಲಂಚ ಆರೋಪದಡಿ ಬೆಂಗಳೂರು ಡಿಸಿ ಮಂಜುನಾಥ್‍ರನ್ನು ಎಸಿಬಿ ಬಂಧಿಸಿದೆ. ಪಿಎಸ್‍ಐ ಕೇಸಲ್ಲಿ ಮೊನ್ನೆಯಷ್ಟೇ ದೊಡ್ಡ ಅಧಿಕಾರಿಗಳ ಬಂಧನ ಆಗದ ಬಗ್ಗೆ ಹೈಕೋರ್ಟ್ ಛೀಮಾರಿ ಬೆನ್ನಲ್ಲೇ ಸರ್ಕಾರ ಫುಲ್ ಆಕ್ಟೀವ್ ಆಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಡಿಜಿಪಿ ದರ್ಜೆ ಅಧಿಕಾರಿಯ ಬಂಧನ ಆಗಿದ್ದು, ಅಮೃತ್ ಪೌಲ್ ಅವರನ್ನು ಸಿಐಡಿ 10 ದಿನಗಳ ವಶಕ್ಕೆ ಪಡೆದುಕೊಂಡಿದೆ. ಇನ್ನು ಐಎಎಸ್ ಮಂಜುನಾಥ್‍ರನ್ನು ಎಸಿಬಿ ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಹುದ್ದೆಯಿಂದ ಅಮೃತ್‍ಪೌಲ್‍ರನ್ನು, ಮಂಜುನಾಥ್‍ರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶಿಸಿದೆ. ಈ ಮಧ್ಯೆ ಸಿಐಡಿ ಮುಂದೆ ಅಮೃತ್‍ಪೌಲ್ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದು ಕಣ್ತಪ್ಪಿನಿಂದ ಆಗಿರೋ ಅಕ್ರಮ ಅಷ್ಟೇ. ನಾನು ಯಾವುದೇ ಕ್ರಿಮಿನಲ್ ಉದ್ದೇಶ ಇಟ್ಟುಕೊಂಡು ತಪ್ಪು ಮಾಡಿಲ್ಲ. ನಾನು ಯಾರಿಂದಲೂ ಹಣ ಪಡೆದಿಲ್ಲ. ಕೆಳಹಂತದ ಅಧಿಕಾರಿಗಳನ್ನು ನಾನು ನಂಬಿದ್ದೇನೆ ಅಷ್ಟೇ.. ಕೆಲವೊಂದು ಲೋಪದೋಷಗಳಿಂದ ಅಕ್ರಮ ನಡೆದಿದೆ. ಆ ಲೋಪದೋಷಗಳಿಗೆ ನಾನೂ ಕಾರಣ. ನಾನು ಮುತುವರ್ಜಿಯಿಂದ ನೋಡಿಕೊಳ್ಳಬೇಕಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
#publictv #newscafe #hrranganath