ಸಣ್ಣ ಮಳೆಗೂ ಬೆಂಗಳೂರಿನ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತೆ. ರಸ್ತೆಗುಂಡಿಗಳಿಂದ ನಮಗೆ ಮುಕ್ತಿ ಕೊಡಿ ಅಂತ ಜನರು ಬೇಡಿಕೊಂಡರೂ ಬಿಬಿಎಂಪಿ ಮಾತ್ರ ಡೋಂಟ್‍ಕೇರ್ ಎನ್ನುತ್ತೆ.. ಆದರೆ ಮೋದಿ ಇವತ್ತು ಬೆಂಗಳೂರಿಗೆ ಬರ್ತಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಬೆಂಗಳೂರನ್ನು ಲಕಲಕ ಎನ್ನಿಸಲು ಹಗಲು ರಾತ್ರಿ ಕಷ್ಟ ಪಡ್ತಿದ್ದಾರೆ. ಬೆಂಗಳೂರಿನಲ್ಲಿ ಮೋದಿ ಇವತ್ತು ಸಂಚರಿಸುವ ಮಾರ್ಗದ ರಸ್ತೆಗಳಲ್ಲಿ ಒಂದೂ ಗುಂಡಿಗಳಿಲ್ಲದಂತೆ.. ಗಲೀಜು ಕಾಣದಂತೆ.. ಡಾಂಬರೀಕರಣ ಮಾಡಲಾಗ್ತಿದೆ. ಮಧ್ಯಾಹ್ನ 12ರ ಸುಮಾರಿಗೆ ಪ್ರಧಾನಿ ಮೋದಿ ಯಲಹಂಕ ವಾಯುನೆಲೆಯಿಂದ ಮೇಖ್ರಿ ಸರ್ಕಲ್ ಮಾರ್ಗವಾಗಿ, ಐಐಎಸ್‍ಸಿಗೆ ಬರಲಿದ್ದಾರೆ. ನಂತರ ಜ್ಞಾನಭಾರತಿ ಆವರಣದ ಸ್ಕೂಲ್ ಆಫ್ ಎಕಾನಾಮಿಕ್ಸ್‍ಗೆ ಭೇಟಿ ಕೊಡಲಿದ್ದಾರೆ. ಹೀಗಾಗಿ ಮೋದಿ ಸಂಚರಿಸುವ ಮೇಖ್ರಿ ಸರ್ಕಲ್‍ನಲ್ಲಂತೂ, ಡಿವೈಡರ್ ಲೈನ್ ಹಾಕಿ, ಭಾರತೀಯ ವಿಜ್ಞಾನ ಸಂಸ್ಥೆಯ ಎಂಟ್ರಿ ಗೇಟ್ ತನಕ ಕಂಪ್ಲೀಟ್ ಡಾಂಬರಿಕರಣ ಮಾಡಲಾಗಿದೆ. ಎಲ್ಲಿಯೂ ಒಂಚೂರು ಕಸ ಕೂಡ ಕಾಣ್ತಿಲ್ಲ. ಅಂದ ಹಾಗೇ, ನಿನ್ನೆಯಷ್ಟೇ, ದೆಹಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಿದ ಐಟಿಪಿಓ ಸುರಂಗದಲ್ಲಿ ಬಿದ್ದಿದ್ದ ಕಸವನ್ನು, ಒಂದು ವಾಟರ್ ಬಾಟಲ್ ಅನ್ನು ಖುದ್ದು ಪ್ರಧಾನಿಯವರೇ ಎತ್ತಿದ್ದರು.
#publictv #newscafe #hrranganath #pmmodi