News Cafe | Rahul Gandhi To Appear Before ED Today Also | HR Ranganath | June 15, 2022

Public TV 2022-06-15

Views 0

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಸದ್ಯಕ್ಕೆ ಇ.ಡಿ ಸಂಕಷ್ಟ ತಪ್ಪುವಂತೆ ಕಾಣ್ತಿಲ್ಲ.. ಸತತ 2 ದಿನಗಳಿಂದ ಇ.ಡಿ ವಿಚಾರಣೆ ಎದುರಿಸುತ್ತಿರುವ ರಾಹುಲ್, 3ನೇ ದಿನವಾದ ಇವತ್ತೂ ವಿಚಾರಣೆಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ. ಮೊದಲ ದಿನ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದ ಇ.ಡಿ ಅಧಿಕಾರಿಗಳು ಯಂಗ್ ಇಂಡಿಯಾ ಮಾಡಿರುವ ಸಾಲಗಳ ಬಗ್ಗೆ ಕೆಲವು ದಾಖಲೆ ಸಲ್ಲಿಸಲು ಸೂಚನೆ ನೀಡಿದ್ದರು. ನಿನ್ನೆ ದಾಖಲೆಗಳನ್ನು ಸಲ್ಲಿಸಿ ರಾಹುಲ್ ಗಾಂಧಿ ವಿಚಾರಣೆ ಎದುರಿಸಿದ್ದಾರೆ. 2 ದಿನಗಳ ವಿಚಾರಣೆಯಲ್ಲಿ ಹತ್ತಾರು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದು ಇ.ಡಿ. ಲಿಖಿತ ರೂಪದಲ್ಲಿ ದಾಖಲು ಮಾಡಿಕೊಳ್ಳುತಿದೆ. ಈವರೆಗೂ 50 ಪುಟಗಳ ಹೇಳಿಕೆ ದಾಖಲಾಗಿದ್ದು, ಎಲ್ಲಾ ಪುಟಗಳ ಮೇಲೆ ಇ.ಡಿ ಅಧಿಕಾರಿಗಳು ಸಹಿ ಮಾಡಿಸಿಕೊಂಡಿದ್ದಾರೆ ಅಂತ ತಿಳಿದು ಬಂದಿದೆ. ಡೋಟೆಕ್ಸ್ ಮರ್ಚಾಂಡೈಸ್ ಕಂಪನಿ ಮೂಲಕ ಯಂಗ್ ಇಂಡಿಯಾ ಸಾಲ ಪಡೆದಿದ್ದು ಮತ್ತು ಅದನ್ನು ಮರು ಪಾವತಿ ಮಾಡದಿರುವುದು ಇ.ಡಿ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಇದಕ್ಕೆ ಉತ್ತರ ನೀಡಿರುವ ರಾಹುಲ್ ಗಾಂಧಿ, ಡೋಟೆಕ್ಸ್ ಮರ್ಚಾಂಡೈಸ್‍ಗೆ ಸಾಲ ಮರುಪಾವತಿ ಮಾಡಿರುವ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ ಇಡಿ ಯಂಗ್ ಇಂಡಿಯಾಗೆ ಇರುವ ಹಣಕಾಸು ಮೂಲ ಮತ್ತು ವಿದೇಶಿ ಹೂಡಿಕೆಗಳ ಬಗ್ಗೆ ಇ.ಡಿ ಪರಿಶೀಲನೆ ಮಾಡುತ್ತಿದೆ.

#publictv #newscafe #hrranganath

Share This Video


Download

  
Report form
RELATED VIDEOS