ಮಾಜಿ ಸಿಎಂ ಬಿಎಸ್‍ವೈ ಹಾಗೂ ಸಚಿವ ಸೋಮಣ್ಣ ನಡ್ವೆ ಕೋಲ್ಡ್ ವಾರ್ ಇದೆ ಅನ್ನೋ ಮಾತುಗಳು ಬಿಜೆಪಿ ವಲಯದಲ್ಲಿ ಸದಾ ಕೇಳಿ ಬರ್ತಿದ್ವು. ಇದಾದ ಬಿಎಸ್‍ವೈ ಮೇಲಿನ ಕೋಪ ವಿಜಯೇಂದ್ರ ಮೇಲೆ ತಿರುಗಿದ್ಯಾ ಅನ್ನೋ ಪ್ರಶ್ನೆಗೆ ಪುಷ್ಠಿ ನೀಡುವಂತ ಘಟನೆಯೊಂದು ಮೈಸೂರಲ್ಲಿ ನಡೆದಿದೆ. ಒಂದೇ ವೇದಿಕೆಯಲ್ಲಿದ್ರೂ ಸಚಿವ ಸೋಮಣ್ಣ ಹಾಗೂ ವಿಜಯೇಂದ್ರ ಮಾತಾಡೇ ಇಲ್ಲ. ಒಬ್ಬರಿಗೊಬ್ಬರು ಮುಖ ಸಹ ನೋಡಲಿಲ್ಲ. ವೇದಿಕೆ ಮೇಲೆ ಮಾತಾಡುವಾಗಲೇ ವಿಜಯೇಂದ್ರಗೆ ಸೋಮಣ್ಣ ಟಾಂಗ್ ಕೊಟ್ರು. ಬೆಂಗಳೂರಲ್ಲಿ ಐದು ಬಾರಿ ಶಾಸಕನಾಗಿದ್ದೇನೆ. ನಮಗೆ ಅವಮಾನ ಮಾಡ್ಬೇಡಿ. ಸುಮ್ಮನೆ ಕೇಕೆ ಹಾಕಿ ವಿಜಯೇಂದ್ರನನ್ನು ಹರಕೆ ಕುರಿ ಮಾಡ್ಬೇಡಿ ಅಂದ್ರು. ಜೊತೆಗೆ ಜೈಕಾರಗಳಿಗೆ ಮರುಳಾಗ್ಬೇಡಿ ಅಂತ ವಿಜಯೇಂದ್ರಗೂ ಬುದ್ಧಿ ಹೇಳಿದ್ರು. ಇದಕ್ಕೂ ಮುನ್ನ ಸಂಸದ ಪ್ರತಾಪ್ ಸಿಂಹ, ಸೋಮಣ್ಣ-ವಿಜಯೇಂದ್ರ ಜೋಡೆತ್ತುಗಳಾಗಿ ದುಡಿದ್ರೆ ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಗೆಲುವು ಖಚಿತ ಅಂದಿದ್ರು. ಈ ಮಾತಿಗೆ ಕಸಿವಿಸಿಕೊಂಡ ಸೋಮಣ್ಣ ನನಗೆ 71 ವರ್ಷ, ವಿಜಯೇಂದ್ರನಿಗೆ 46 ವರ್ಷ. ನಾನು ವಿಜಯೇಂದ್ರ ಜೋಡೆತ್ತು ಆಗಲು ಹೇಗೆ ಸಾಧ್ಯ..? ವಿಜಯೇಂದ್ರ ನನ್ನ ಚಿಕ್ಕಪ್ಪನ ಮಗನೂ ಅಲ್ಲ. ದೊಡ್ಡಪ್ಪನ ಮಗನೂ ಅಲ್ಲ. ನನ್ನ ಶತ್ರುವೂ ಅಲ್ಲ. ಆತ ಬೆಳೆಯಲು ನನ್ನ ತಕರಾರಿಲ್ಲ. ಕೆಲವು ಸಣ್ಣ ಪುಟ್ಟ ಲೋಪಗಳ ಬಗ್ಗೆ ಕಿವಿಮಾತು ಹೇಳಿದ್ದೇನೆ ಅಂದ್ರು.
#publictv #vsomanna #byvijayendra