ಅವರೆಲ್ಲಾ ಕೇಂದ್ರ, ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನ ಮಹಿಳೆಯರು, ಮಕ್ಕಳಿಗೆ ತಲುಪಿಸುವ ಕಾರ್ಯಕರ್ತರು. ಮಕ್ಕಳು, ಗರ್ಭಿಣಿಯರ ಅರೋಗ್ಯ ಸೇರಿ ಚುನಾವಣೆ, ಅರೋಗ್ಯ ಇಲಾಖೆ ಕೆಲಸ ಮಾಡುತ್ತಿರುವ ಅಂಗನವಾಡಿ ಶಿಕ್ಷಕರು. ಆದ್ರೆ ಸರ್ಕಾರ ಅವರಿಗೆ ಕೊಡಬೇಕಾದ ಸವಲತ್ತಿರಲಿ ವೇತನ ಕೂಡ ಸಿಗುತ್ತಿಲ್ಲ, ಕಾರ್ಯಕರ್ತರ ವ್ಯಥೆ.
ಅರೋಗ್ಯ ಇಲಾಖೆ, ಚುನಾವಣೆ ಇಲಾಖೆ ಮಾತ್ರವಲ್ಲದೆ ಗ್ರಾಮೀಣ ಭಾಗದ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಅರೋಗ್ಯ, ಅಗತ್ಯ ಮಾಹಿತಿ, ದಾಖಲೆ ಎಲ್ಲವನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಅಂಗನವಾಡಿ ಕಾರ್ಯಕರ್ತೆಯರ ಕೆಲಸ. ಇದಕ್ಕಾಗಿ ಸರ್ಕಾರಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಿದೆ. ಆದರೆ, ರೀಚಾರ್ಜ್ ಮಾಡ್ತಿಲ್ವಂತೆ. ಇದ್ರಿಂದ ರಾಜ್ಯದಲ್ಲಿರುವ ಸಾವಿರಾರು ಅಂಗನವಾಡಿ ಶಿಕ್ಷಕರು, ಕಾರ್ಯಕರ್ತರು, ಮಕ್ಕಳು ಮತ್ತು ಮಹಿಳೆಯರ ಕಲ್ಯಾಣ ಮಾಡಲಾಗದೇ ಪರದಾಡುವಂತಾಗಿದೆ.
ಮಾತೃ ಪೂರ್ಣ, ಮಾತೃಶ್ರೀ, ಭಾಗ್ಯಲಕ್ಷ್ಮಿ, ಸಮಗ್ರ ಶಿಶು ಅಭಿಯಾನ, ಪೋಷಣ್ ಅಭಿಯಾನ ಸೇರಿದಂತೆ ಹತ್ತು ಹಲವು ಯೋಜನೆಗಳನ್ನ ಸರ್ಕಾರ ಜಾರಿ ಮಾಡಿದೆ. ಈ ಮಧ್ಯೆ ಪೌಷ್ಟಿಕ ಆಹಾರ, ಮೊಟ್ಟೆ-ಹಾಲು, ಕಾಳು ಕೊಡುವ ಜವಾಬ್ದಾರಿ ಕೂಡ ಈ ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರ ಮೇಲಿದೆ. ಇಷ್ಟೆಲ್ಲಾ ಜವಬ್ದಾರಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರ ಪಾಡು ಮಾತ್ರ ಹೇಳ ತೀರದಂತಾಗಿದೆ.
ಕೆಲಸದ ಒತ್ತಡ ಹಾಗೂ ಪಾರದರ್ಶಕ ಸೇವೆ ನೀಡುವ ದೃಷ್ಟಿಯಿಂದ ಸರ್ಕಾರ ಅಂಗನವಾಡಿ ಶಿಕ್ಷಕರಿಗೆ ಸ್ಮಾರ್ಟ್ಫೋನ್ ಕೊಟ್ಟಿದೆ. ರಿಚಾರ್ಜ್ ಮಾಡಿಲ್ಲ. ಹೀಗಾಗಿ ಕಳೆದ 4 ತಿಂಗಳಿನಿಂದ ಮಾಹಿತಿ ನೀಡಲು ಸಾಧ್ಯವಾಗ್ತಿಲ್ಲ. ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿದ್ದು ಎಲ್ಲಾ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ನೀಡಲಾಗಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 40 ಕಡತಗಳು ಸ್ಮಾರ್ಟ್ ಫೋನ್ ಮೂಲಕವೇ ನಿರ್ವಹಿಸಲಾಗ್ತಿದೆ. 10 ಲಕ್ಷಕ್ಕೂ ಹೆಚ್ಚು ಮಕ್ಕಳು, ಗರ್ಭಿಣಿ, ಬಾಣಂತಿಯರ ಮಾಹಿತಿ ಹಾಗೂ ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯ ಮೇಲೆ ನಿಗಾ ವಹಿಸಲಾಗಿದೆ. ಇನ್ನೂ ಅಂಗನವಾಡಿ ಕಾರ್ಯಕರ್ತರು ಯಾಕ್ ಸರ್ ಈ ಕಷ್ಟ ಅಂತ ಕೋಲಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನ ಕೇಳಿದ್ರೆ ಅವರು ಇನ್ನೊಂದು ವಾರದಲ್ಲಿ ಸರಿ ಹೋಗುತ್ತೆ ಅಂತಾರೆ.
ಒಟ್ನಲ್ಲಿ ಅಂಗನವಾಡಿ ಕಾರ್ಯಕರ್ತರ ಕೆಲಸ ಸುಲಭ ಮಾಡುತ್ತಿದ್ದ ಸ್ಮಾರ್ಟ್ ಫೋನ್ ಉದ್ದೇಶಕ್ಕೆ ಬ್ರೇಕ್ ಬಿದ್ದಿದೆ. ಸ್ಮಾರ್ಟ್ ಫೋನ್ ಅಪ್ಲಿಕೇಷನ್, ಸರ್ವರ್ ನಿಷ್ಕ್ರಿಯವಾಗುವ ಮುನ್ನ ಇಲಾಖೆ, ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಆಡಳಿತ ಯಂತ್ರ ನಿಧಾನವಾಗಿ ಕುಸಿಯುವ ಹಂತ ತಲುಪುವುದರಲ್ಲಿ ಯಾವುದೆ ಅನುಮಾನವಿಲ್ಲ.
Government Is Not Providing Currency For Smartphones Of Anganwadi Workers In Kolar District
#publictv #kolar
Watch Live Streaming On http://www.publictv.in/live