ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮಾಡ್ತಿದ್ದ ಯುವಕನಿಗೆ ಸ್ಥಳೀಯರು ಧರ್ಮದೇಟು ಕೊಟ್ಟಿದ್ದಾರೆ. ಕೊಪ್ಪಳ ನಗರದ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಬಸ್ ಹತ್ತೋ ವೇಳೆ ಮೊಬೈಲ್ ಕದ್ದು ಖದೀಮ ಪರಾರಿ ಆಗ್ತಿದ್ದ. ಈ ವೇಳೆ ಚೇಸ್ ಮಾಡಿ ಯುವಕನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರು ಥಳಿಸುತ್ತಿದ್ದಂತೆ ತಪ್ಪಿಸಿಕೊಳ್ಳಲು ಕೆಳಗೆ ಬಿದ್ದು ಕಳ್ಳ ಹೈಡ್ರಾಮಾವನ್ನೇ ಮಾಡಿದ್ದಾನೆ. ಆಳಿಗೊಂದು ಏಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
#publictv #koppala #theft