ಮೇಲ್ಮನೆ ಟಿಕೆಟ್ ಮಿಸ್ ಆದ್ರೂ ಕೂಡ ಬಿಎಸ್‍ವೈ ಪುತ್ರ ವಿಜಯೇಂದ್ರನ ಇಮೇಜ್ ಹಾಗೂ ವಿಶ್ವಾಸ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ಥೇಟ್ ಚೆಂಡಿನಂತೆ ಪುಟಿಯುತ್ತಿದ್ದಾರೆ. ಪಕ್ಷದಲ್ಲಿನ ತಮ್ಮ ವಿರೋಧಿಗಳಿಗೆ ಹೋದಲ್ಲಿ ಬಂದಲ್ಲಿ ತಿರುಗೇಟು ಕೊಡ್ತಾ ಇದ್ದಾರೆ. ಟಿಕೆಟ್ ಕೈತಪ್ಪಿದ ಮರುದಿನದಿಂದಲೇ ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ತಿದ್ದಾರೆ. ಮೊನ್ನೆ ಮೈಸೂರು, ನಿನ್ನೆ ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ನಿನ್ನೆ ಹಾಸನದಲ್ಲಿ ಮಾತನಾಡಿದ ವಿಜಯೇಂದ್ರ, ಕಾಡಿನಲ್ಲಿರುವ ಹುಲಿಯನ್ನು ಬೇಟೆಯಾಡಿ.. ಬೋನಿನಲ್ಲಿ ಇಟ್ಟರೂ ಹುಲಿ ಹುಲಿಯೇ.. ಝೂನಲ್ಲಿ ಹಾಕಿದಾ ಕ್ಷಣ.. ಹುಲು ಹುಲ್ಲು ತಿನ್ನಲ್ಲ.. ಅಂದಿದ್ದಾರೆ. ಈ ಮೂಲ ಪಕ್ಷದಲ್ಲಿನ ತಮ್ಮ ವಿರೋಧಿಗಳಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಇದು ಪಕ್ಷದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆಯೇ, ಇಂದು ರಾಮನಗರಕ್ಕೆ ಭೇಟಿ ನೀಡ್ತಿದ್ದಾರೆ.
#NewsCafe #PublicTV #BYVijayendra