ವಿಧಾನ ಪರಿಷತ್‍ನ 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ. ಆದ್ರೆ, ಬಿಜೆಪಿ ಇನ್ನೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ರಿಲೀಸ್ ಮಾಡಿಲ್ಲ. ವರಿಷ್ಠರಿಗೆ ಕಳಿಸಿರುವ ಪಟ್ಟಿಯಲ್ಲಿರುವ ಎಲ್ಲರೂ ಬೆಂಗಳೂರಿಗೆ ಬನ್ನಿ ಅಂತ ರಾಜ್ಯ ಬಿಜೆಪಿ ಘಟಕ ಬುಲಾವ್ ನೀಡಿದೆ. ಯಾವುದೇ ಕ್ಷಣದಲ್ಲಾದ್ರೂ ಬಿಜೆಪಿ ಪಟ್ಟಿ ರಿಲೀಸ್ ಮಾಡುವ ಸಾಧ್ಯತೆ ಇದೆ. ಪರಿಷತ್ ಅಭ್ಯರ್ಥಿಗಳಾಗಿ ಆಯ್ಕೆಯಾದ ನಾಲ್ವರು ಮತ್ತು ರಾಜ್ಯ ಬಿಜೆಪಿಯ ಪ್ರಮುಖರೊಬ್ಬರು ಕರೆ ಮಾಡಿ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದೆ. ಅಧಿಕೃತ ಪಟ್ಟಿ ಬಿಡುಗಡೆ ತನಕ ಯಾರಿಗೂ ಮಾಹಿತಿ ನೀಡದಂತೆ ಅಭ್ಯರ್ಥಿಗಳಿಗೆ ತಾಕೀತು ಮಾಡಿದೆ ಅಂತ ತಿಳಿದು ಬಂದಿದೆ. ಇನ್ನು, ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲ್ಮನೆ ಟಿಕೆಟ್ ನಿರಾಕರಿಸಿ, ಸದ್ಯಕ್ಕೆ ಚುನಾವಣಾ ರಾಜಕೀಯ ಪ್ರವೇಶ ಬೇಡ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗ್ತಿದೆ. ಕುಟುಂಬ ರಾಜಕಾರಣದ ಬಗ್ಗೆ ನಾವೇ ಮಾತಾನಾಡಿ ಈಗಲೇ ಮಣೆ ಹಾಕುವುದು ಬೇಡ ಅಂತ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆಯೂ ನಡೆದಿತ್ತು. ಹಾಗಾಗಿ, ವಿಜಯೇಂದ್ರ ಪಕ್ಷ ಸಂಘಟನೆಗೆ ಇರಲಿ. ಈಗ ಟಿಕೆಟ್ ಕೊಟ್ಟರೆ ಮತ್ತೆ ವಿಧಾನಸಭೆಯಲ್ಲೂ ಟಿಕೆಟ್ ಕೊಡಬೇಕಾಗಬಹುದು. ಸರ್ಕಾರದ ವಿಚಾರದಲ್ಲಿ ಸದ್ಯಕ್ಕೆ ವಿಜಯೇಂದ್ರ ಬೇಡ ಅಂತ ಹೈಕಮಾಂಡ್ ನಾಯಕರು ತೀರ್ಮಾನಿಸಿದ್ದಾರೆಂದು ಬಿಜೆಪಿ ಉನ್ನತ ಮೂಲಗಳು ಹೇಳ್ತಿವೆ.
#HRRanganath #Newscafe #PublicTV