ಸುಂಕ ಕಡಿತದ ಬಳಿಕ ತೈಲದ ಮೇಲಿನ ವ್ಯಾಟ್ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಬೆನ್ನಲ್ಲೇ ಕೇರಳದಲ್ಲಿ ಲೀಟರ್ ಪೆಟ್ರೋಲ್ ಮೇಲೆ 1.36 ರೂಪಾಯಿ, ಡೀಸೆಲ್‍ಗೆ 2.41 ರೂಪಾಯಿ ವ್ಯಾಟ್ ಕಡಿತ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಪೆಟ್ರೋಲ್‍ಗೆ 2.08 ರೂಪಾಯಿ ಹಾಗೂ ಡೀಸೆಲ್‍ಗೆ 1.44 ರೂಪಾಯಿ ವ್ಯಾಟ್ ಕಡಿತ ಮಾಡಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಜಾಸ್ತಿಯಾಗಿದೆ. ಸ್ವಪಕ್ಷೀಯರೇ ತೈಲ ಬೆಲೆ ಕಮ್ಮಿ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. ಇನ್ನು, ದಾವೋಸ್ ಪ್ರವಾಸಕ್ಕೆ ತೆರಳಿರುವ ಸಿಎಂ, ಕರ್ನಾಟಕದಲ್ಲೂ ಪರಿಶೀಲನೆ ನಡೆಸೋದಾಗಿ ಹೇಳಿದ್ದಾರೆ. ಆದರೆ, ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ. ದರ ಏರಿಕೆ ಮಾಡುವಾಗ ನಮ್ಮನ್ನ ಕೇಳಿಲ್ಲ. ಈಗ ಇಳಿಸಿ ಅಂತ ಕೇಳೋದ್ಯಾಕೆ..? ನಮ್ಮಲ್ಲಿ ವ್ಯಾಟ್ ಕಡಿತ ಮಾಡಲ್ಲ ಅಂತ ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಹೇಳಿದ್ದಾರೆ. ಇನ್ನು, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೂಡ ಕಿಡಿಕಾರಿದ್ದಾರೆ. ಸರ್ಕಾರ ಅನುದಾನ ನೀಡದೇ.. ಹೆಚ್ಚಿನ ಹಣಕಾಸು ಹರಿಸದೇ ಇದ್ದರೆ ರಾಜ್ಯಗಳು ವ್ಯಾಟ್‍ನಿಂದ ಬರುವ ಆದಾಯ ತ್ಯಜಿಸಿ ಆಡಳಿತ ನಡೆಸಲು ಸಾಧ್ಯವೇ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿಗರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯೇತರ ಆಡಳಿತ ಇರೋ ರಾಜ್ಯಗಳೂ ವ್ಯಾಟ್ ಕಡಿತ ಮಾಡ್ಬೇಕು ಅಂತ ಒತ್ತಾಯಿಸಿದ್ದಾರೆ. ಈಗಾಗಲೇ ಕೇರಳ, ಮಹಾರಾಷ್ಟ್ರದ ಸಾಲಿಗೆ ರಾಜಸ್ಥಾನ, ಒಡಿಶಾಗಳು ವ್ಯಾಟ್ ಕಡಿತಗೊಳಿಸಿವೆ.
#PublicTV #HRRanganath #News Cafe