News Cafe | Congress Leader Balakrishna Writes To DK Shivakumar Against HM Revanna | HR Ranganath
#PublicTV #NewsCafe #HRRanganath
ರಾಜ್ಯ ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಒಂದು ವಿಡಿಯೋ.. ಒಂದು ಫೋಟೋ.. ಒಂದು ಬಹಿರಂಗ ಪತ್ರದಿಂದ ಕಾಂಗ್ರೆಸ್‌ನಲ್ಲಿ ಒಳಜಗಳದ ಸುಳಿವು ಸಿಕ್ತಿದೆ. ಇದು ಮಾಗಡಿ ಕಾಂಗ್ರೆಸ್ ನಾಯಕರ ಭಿನ್ನಮತದ ಬೇಗುದಿಯ ಸುದ್ದಿ. ಮಾಗಡಿ ಜೆಡಿಎಸ್ ಶಾಸಕ ಮಂಜುನಾಥ್ ಜೊತೆ ಸೇರಿಕೊಂಡು ಮಾಜಿ ಸಚಿವ ಎಚ್.ಎಂ.ರೇವಣ್ಣ ನನ್ನ ವಿರುದ್ಧ ಮಸಲತ್ತು ಮಾಡ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಬಾಲಕೃಷ್ಣ ಸುದೀರ್ಘ ಪತ್ರ ಬರೆದಿದ್ದಾರೆ. ಹೋದ್ಕಡೆ ಬಂದ್ಕಡೆ ಇಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಂಡು ಕಾಂಗ್ರೆಸ್ ಕಾರ್ಯಕರ್ತರಲ್ಲೇ ಗೊಂದಲ ಮೂಡಿಸುತ್ತಿದ್ದಾರೆ. ಮಂಜುನಾಥ್ ಕಚೇರಿಯಲ್ಲಿ ಎಚ್‌ಎಂ ರೇವಣ್ಣ ಫೋಟೋ ಹಾಕಿಕೊಂಡಿದ್ದಾರೆ ಅಂತ ಫೋಟೋ ಸಮೇತ ದಾಖಲೆ ನೀಡಿದ್ದಾರೆ. ಡಿಕೆಶಿಗೆ ಬಾಲಕೃಷ್ಣ ಬರೆದಿರುವ ಪತ್ರದಲ್ಲಿ ಸಾರಾಂಶ ನೋಡೋದಾದ್ರೆ..