News Cafe With HR Ranganath | Heavy Rain Lashes Bengaluru; Low Lying Areas Inundated | May 18, 2022

Public TV 2022-05-18

Views 12

ರಾಜಧಾನಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸ್ತಿದೆ. ರಾತ್ರಿ ಸುರಿದ ಮಳೆಗೆ ರಾಜಧಾನಿ ತೊಯ್ದು ತೊಪ್ಪೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾದ್ರೆ, ನೂರಾರು ಮನೆಗಳಿಗೆ ಮೋರಿ ನೀರು ನುಗ್ಗಿದೆ. ವಿಜಯನಗರ, ತ್ಯಾಗರಾಜನಗರ, ಆರ್‍ಆರ್ ನಗರದ ಕೆಂಚೇನಹಳ್ಳಿ, ತಿಗಳರಪಾಳ್ಯ, ನಾಗರಬಾವಿ, ಭದ್ರಪ್ಪ ಲೇಔಟ್‍ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಹಾಳಾಗಿವೆ. ಶಾಂತಿನಗರ, ನಾಗರಬಾವಿ, ಎಚ್‍ಎಎಲ್, ರಾಜ್‍ಕುಮಾರ್ ರಸ್ತೆ, ಕಲ್ಯಾಣನಗರದಲ್ಲಿ ರಸ್ತೆಗಳೆಲ್ಲಾ ನದಿಗಳಾಗಿವೆ. ಮಳೆ ನೀರಿನಲ್ಲಿ ಬೈಕ್‍ಗಳು ಕೊಚ್ಚಿ ಹೋಗಿವೆ. ನಾಯಂಡಹಳ್ಳಿ ಜಂಕ್ಷನ್ ಮಿನಿ ಕೆರೆಯಂತಾಗಿದ್ದು, ಕಾರುಗಳು ನೀರುನಲ್ಲಿ ಮುಳುಗಿದ್ದವು. ರಸ್ತೆ ಮೇಲೆ ನಿಂತಿದ್ದ ನೀರಲ್ಲಿ ಯುವಕರು ಸರ್ಕಾರ ಕಟ್ಟಿಸಿರೋ ಸ್ವಿಮ್ಮಿಂಗ್ ಪೂಲ್.. ಬನ್ನಿ ಈಜಾಡಿ ಅಂತ ಈಜಾಡಿ ಸರ್ಕಾರದ ಮಾನ ಕಳೆದ್ರು. ಯಶವಂತಪುರ ಬಸ್ ನಿಲ್ದಾಣ ಜಲಮಯವಾಗಿದ್ರೆ.. ಓಕಳಿಪುರಂ ಅಂಡರ್‍ಪಾಸ್‍ನಲ್ಲಿ ಜಲಪಾತ ಸೃಷ್ಟಿಯಾಗಿತ್ತು. ಡಾಲರ್ಸ್ ಕಾಲೋನಿಯಲ್ಲಿ ಉದ್ಯಮಿಗಳ ಮನೆಗಳಿಗೂ ಮೋರಿ ನೀರು ಎಂಟ್ರಿಕೊಟ್ಟಿದೆ. ಪಾರ್ಕಿಂಗ್ ಲಾಟ್‍ಗಳಿಗೆ ಚರಂಡಿ ನೀರು ನುಗ್ಗಿ ಐಷಾರಾಮಿ ಕಾರುಗಳು ಮುಳುಗಿವೆ. ಲಹರಿ ಸಂಸ್ಥೆಯ ವೇಲು ನಿವಾಸದ ಅಂಡರ್‍ಪಾಸ್ ಸಂಪೂರ್ಣ ಜಲಾವೃತವಾಗಿತ್ತು. ವೈಯ್ಯಾಲಿಕಾವಲ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಲಮಂಡಳಿ ಕಾಮಗಾರಿ ನಡೆಸಿತ್ತು. ಆದ್ರೆ ಸರಿಯಾಗಿ ಗುಂಡಿ ಮುಚ್ಚಿರಲಿಲ್ಲ.. ಪರಿಣಾಮ ಜೋರು ಮಳೆಯಿಂದಾಗಿ ಗುಂಡಿ ಮತ್ತಷ್ಟು ದೊಡ್ಡದಾಗಿ ಪೊಲೀಸ್ ಜೀಪ್ ಹಳ್ಳದಲ್ಲಿ ಸಿಲುಕಿಕೊಳ್ತು.

#HRRanganath #NewsCafe #PublicTV #Rain

Share This Video


Download

  
Report form
RELATED VIDEOS