News Cafe | Some Delhi Areas Getting Contaminated Water From Delhi Jal Board | HR Ranganath | May 17, 2022
ಯುಮನಾ ನದಿ ನೀರಿನ ಪ್ರಮಾಣ ಪೂರ್ತಿಯಾಗಿ ಇಳಿಕೆ ಕಂಡಿದ್ದು, ಕುಡಿಯುವ ಶುದ್ಧ ನೀರಿಗೆ ಅಭಾವ ಕಂಡುಬಂದಿದೆ. ದೆಹಲಿಯ ನಗರಗಳಾದ ವಾಜಿರಬಾದ್, ಛಾಂದ್ರವಾಲ್ ಹಾಗೂ ಓಕ್ಳಾ ಪ್ರದೇಶದಲ್ಲಿ ನೀರು ಶುದ್ದೀಕರಣ ಘಟಕಕ್ಕೆ ನೀರು ಸಪ್ಟೈ ಮಾಡಲು ಸಾಧ್ಯವಾಗ್ತಿಲ್ಲ ಎಂದು ದೆಹಲಿ ಸರ್ಕಾರ ಸೋಮವಾರ ಅಧಿಕೃತವಾಗಿ ತಿಳಿಸಿದೆ. ಬಹುತೇಕ ನೀರು ಇಂಗಿ ಹೋಗಿದ್ದು ದೆಹಲಿಯ ಹೆಚ್ಚಿನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಾಣಿಸಬಹುದು ಎನ್ನುವ ಮುನ್ಸೂಚನೆ ನೀಡಲಾಗಿದೆ. ಛಾಂದ್ರವಾಲ್ ಹಾಗೂ ಓಕ್ಳಾ ಪ್ರದೇಶದಲ್ಲಿ ನೀರು ಶುದ್ದೀಕರಣ ಘಟಕಕ್ಕೆ ಶೇ. 40ರಷ್ಟು ನೀರು ಪೂರೈಕೆ ಕಡಿಮೆಯಾಗಬಹುದು ಎಂದು ದೆಹಲಿ ಜಾಲ್ ಬೋರ್ಡ್ ತಿಳಿಸಿದೆ.
#HRRanganath #NewsCafe #PublicTV