PSI Recruitment Scam : Kalaburagi Jailer Sunanda Goes On Leave..! | Vaijanath Biradar

Public TV 2022-05-14

Views 1

PSI Recruitment Scam : Kalaburagi Jailer Sunanda Goes On Leave..! | Vaijanath Biradar

#PublicTV #PSIRecruitmentScam

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಿಐಡಿ ತನಿಖೆ ಮುಂದುವರಿಸಿದೆ. ಬಂಧಿತ ಕೆಎಸ್‌ಆರ್‌ಪಿ ಕಮಾಂಡೆಂಟ್ ವೈಜನಾಥ್ ಪತ್ನಿ ಜೈಲರ್ ಸುನಂದಾ ಪತಿ ಬಂಧನದಿಂದ ಮುಜುಗರಗೊಂಡು ರಜೆ ಮೇಲೆ ತೆರಳಿದ್ದಾರೆ. ನ್ಯಾಯಾಂಗ ಬಂಧನ ಹಿನ್ನೆಲೆ ಆರೋಪಿ ವೈಜನಾಥ್‌ನನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ವೈಜನಾಥ್ ನ್ಯಾಯಾಂಗ ಬಂಧನ ವಿಷಯ ತಿಳಿದು ಪತ್ನಿ ಜೈಲರ್ ಸುನಂದಾ 10 ದಿನಗಳ ಕಾಲ ರಜೆ ಪಡೆದು ತೆರಳಿದ್ದಾರೆ. ಇತ್ತ ಬಂಧಿತ ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್ ಕಾಶಿನಾಥ್ ಮನೆ ಮೇಲೆ ಸಿಐಡಿ ರೇಡ್ ಮಾಡಿದೆ. ಕಲಬುರಗಿ ನಗರದ ತಾಜ್‌ಸುಲ್ತಾನಪುರ ರಸ್ತೆಯಲ್ಲಿರುವ ಕಾಶಿನಾಥ್ ನಿವಾಸದಲ್ಲಿ ಮಹತ್ವದ ದಾಖಲೆಗಳನ್ನು ಸಿಐಡಿ ವಶಕ್ಕೆ ಪಡೆದಿದೆ. ಮತ್ತೆ ಏಳು ದಿನಗಳ ಕಾಲ ಕಾಶಿನಾಥ್‌ನನ್ನ ಕಸ್ಟಡಿಗೆ ಪಡೆದಿರೋ ಸಿಐಡಿ ವಿಚಾರಣೆ ಚುರುಕುಗೊಳಿಸಿದೆ.

Share This Video


Download

  
Report form