ಹೈಕೋರ್ಟ್ ನ ಕೆಲ ತೀರ್ಪನ್ನು ಕಟ್ಟು ನಿಟ್ಟಾಗಿ ಪಾಲಿಸುವ ರಾಜ್ಯ ಸರ್ಕಾರ ರಸ್ತೆ ಗುಂಡಿಯನ್ನು ಮುಚ್ಚಿ ಎಂದು ನೀಡಿರುವ ಆದೇಶವನ್ನೇಕೆ ಪಾಲಿಸುತ್ತಿಲ್ಲ? ಅಲ್ಲದೆ ಈ ರೀತಿ ಅಪಘಾತಗಳಾದಾಗ ಪ್ರಶ್ನೆ ಮಾಡಲು ಬಿಬಿಎಂಪಿ ಮೇಯರ್ ಇಲ್ಲ, ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರಾಭಿವೃದ್ಧಿ ಸಚಿವರೇ ಆಗಿರುವಾಗ, ರಸ್ತೆಗಳ ದುರಸ್ತಿಗೆ ಮತ್ತು ಮಳೆ ನೀರಿನಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಹಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸುತ್ತಿಲ್ಲವೇ? ಹಾಗೊಂದು ವೇಳೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು ಅದನ್ನು ಅಧಿಕಾರಿಗಳು ಪಾಲಿಸುತ್ತಿಲ್ಲವೇಕೆ? ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.
#PotholesInBangalore #BBMP #BasavarajBommai