ಉಕ್ರೇನ್‌ಗೆ ಹೋಗುವಾಗ ನಾವು ಸ್ವಂತ ರಿಸ್ಕ್ ಮೇಲೆ ಹೊಗಿರ್ತಿವಿ, ಬರುವಾಗಲೂ ನಾವು ರಿಸ್ಕ್ ತೆಗದುಕೊಳ್ಳಲೇಬೇಕು. ಸುಖಾಸುಮ್ಮನೆ ರಾಯಭಾರಿ ಕಚೇರಿ ದೂರುವುದರಲ್ಲಿ ಅರ್ಥವಿಲ್ಲ ಎಂದು ಇಂದು ಖಾರ್ಕೀವ್‌ನಿಂದ ದೆಹಲಿ ತಲುಪಿದ ರುಬಿನಾ ಪಬ್ಲಿಕ್ ಟಿವಿ ಜೊತೆಗೆ ಮಾತಮಾಡಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಗಡಿಯಲ್ಲಿ ನಮ್ಮನ್ನು ಕರೆದಾಗ ತಾಯಿ ಮಕ್ಕಳನ್ನು ಕರೆದಂತೆ ಭಾಸವಾಗುತ್ತಿತ್ತು. ನಮ್ಮೆಲ್ಲ ಕಷ್ಟಗಳು ಅಲ್ಲೆ ಮರೆತುಹೊಯ್ತು, ಭಾರತೀಯಳು ಎನ್ನುವುದಕ್ಕೆ ಹೆಮ್ಮೆ ಇದೆ ಅಂತಾ ರುಬಿನಾ ಭಾವುಕರಾಗಿ ಮಾತನಾಡಿದ್ದಾರೆ.
#PublicTV #Ukraine #Russia