ದೇಶದಾದ್ಯಂತ ಇಂಧನ ಬೆಲೆಗಳು ದಿನಂಪ್ರತಿ ಹೆಚ್ಚಳವಾಗುತ್ತಿದ್ದು, ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಪ್ರಾಮುಖ್ಯತೆ ಕೂಡಾ ಹೆಚ್ಚಳವಾಗುತ್ತಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್‌ಗಳಲ್ಲಿ ಒಂದಾಗಿರುವ ನಮ್ಮ ಬೆಂಗಳೂರಿನಲ್ಲೂ ಕೂಡಾ ಇವಿ ವಾಹನಗಳ ಬಳಕೆಯು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಅನೇಕರು ದೈನಂದಿನ ಪ್ರಯಾಣಕ್ಕಾಗಿ ಇವಿ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬೆಂಗಳೂರು ಇದೀಗ ಅನೇಕ ಇವಿ ಸ್ಟಾರ್ಟ್-ಅಪ್‌ಗಳಿಗೆ ಪ್ರಮುಖ ನೆಲೆಯಾಗಿದ್ದು, ಪ್ರಮುಖ ಕಂಪನಿಗಳು ವಿವಿಧ ಹೊಸ ಇವಿ ಮಾರಾಟ ಮಾರಾಟ ಮಳಿಗೆಗಳನ್ನು ತೆರೆಯುತ್ತಿವೆ.
ಪ್ರಮುಖ ಇವಿ ಕಂಪನಿಗಳು ಈಗಾಗಲೇ ನಗರದಾದ್ಯಂತ ದೊಡ್ಡ ಮಟ್ಟದ ಮಾರಾಟ ಮಳಿಗೆಗಳ ಜಾಲ ವಿಸ್ತರಿಸುತ್ತಿದ್ದು, ಗ್ರಾಹಕರಿಗೆ ಸರಿಯಾದ ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ. ಈ ಸಮಸ್ಯೆಯನ್ನು ಅರಿತಿರುವ ಭಾರತದ ಪ್ರಮುಖ ಎಂಜಿನಿಯರಿಂಗ್ ಕಂಪನಿ ಗ್ರೀವ್ಸ್ ಕಾಟನ್ ಒಂದೇ ಸೂರಿನಡಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಹೊಸ ಮಾದರಿಯ ಇವಿ ವಾಹನ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಇತ್ತೀಚೆಗೆ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ವಿವಿಧ ಬ್ರಾಂಡ್‌ಗಳನ್ನು ಮಾರಾಟ ಮಾಡಲು ಆಟೋಇವಿಮಾರ್ಟ್(AtoEVMart) ಮಳಿಗೆಗಳನ್ನು ಸುಮಾರು 8000 ಚದರ ಅಡಿಯಲ್ಲಿ ಭರ್ಜರಿಯಾಗಿ ಆರಂಭಿಸಿದೆ.
ಆಟೋಇವಿಮಾರ್ಟ್ ಮಾರಾಟ ಮಳಿಗೆಯಲ್ಲಿ ಆಂಪಿಯರ್, ಆಟೋ ಲೈನ್, ಬಾಲನ್ ಇಂಜಿನಿಯರಿಂಗ್, ಕ್ರೇಯಾನ್ ಮೋಟಾರ್ಸ್, ಡಿಟೆಲ್, ಹೀರೋ ಲೆಕ್ಟ್ರೋ, ಗೋ ಝೀರೋ, ಕೈನೆಟಿಕ್, ಎಂಎಲ್‌ಆರ್, ಒಮೆಗಾ ಸೀಕಿ ಮೊಬಿಲಿಟಿ, ರೋವೀಟ್ ಮತ್ತು ವೋಲ್ಟ್ರಾನ್ ನಿರ್ಮಾಣದ ವಿವಿಧ ಬ್ರಾಂಡ್‌ಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಎಲೆಕ್ಟ್ರಿಕ್ ಸೈಕಲ್‌ಗಳು, ಇವಿ ಲೋಡರ್‌ಗಳು, ಇವಿ ಆಟೋಗಳ ವ್ಯಾಪಕ ಶ್ರೇಣಿ ಇಲ್ಲಿ ಖರೀದಿಗೆ ಲಭ್ಯವಿರಲಿದೆ.
ಹೊಸ ಮಾರಾಟ ಮಳಿಗೆಯ ಮೂಲಕ ಗ್ರಾಹಕರಿಗೆ ವಿವಿಧ ವಾಹನಗಳ ಆಯ್ಕೆ ಮತ್ತು ಅನುಕೂಲತೆಯ ಸ್ವಾತಂತ್ರ್ಯ ನೀಡಲಾಗಿದ್ದು, ಹೊಸ ಮಾರಾಟ ಮಳಿಗೆಯಲ್ಲಿ ಆದ್ಯತೆ ಖರೀದಿಯ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಪಡೆದ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯದೊಂದಿಗೆ ವರ್ಧಿತ ಮೌಲ್ಯಗಳನ್ನು ಖಾತ್ರಿಗೊಳಿಸುತ್ತದೆ.
ಹೆಚ್ಚುವರಿಯಾಗಿ ಆಟೋಇವಿಮಾರ್ಟ್ ಕಂಪನಿಯು ಗ್ರಾಹಕರಿಗೆ ರಸ್ತೆಬದಿಯ ನೆರವು, ಸಮಗ್ರ ಸೇವಾ ಪ್ಯಾಕೇಜ್‌ಗಳು ಮತ್ತು ಇ-ಮೊಬಿಲಿಟಿ ಬಿಡಿಭಾಗಗಳನ್ನು ಜಗಳ-ಮುಕ್ತ ಮಾಲೀಕತ್ವ ಖಾತ್ರಿಪಡಿಸಿಲಿದ್ದು, ಆಟೋಇವಿಮಾರ್ಟ್ ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಗಾಗಿ ವರ್ಧಿತ ಸೇವೆಗಳು, ರೆಟ್ರೋಫಿಟ್ ಪರಿಕರಗಳ ಮೇಲೆ ಕೇಂದ್ರೀಕರಿಸುತ್ತದೆ. ಹಾಗಾದರೆ ಗ್ರೀವ್ಸ್ ಕಾಟನ್ ಕಂಪನಿಯ ಆಟೋಇವಿಮಾರ್ಟ್ ಮಾರಾಟ ಮಳಿಗೆಯಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋವನ್ನು ವೀಕ್ಷಿಸಿ.